Mysore
23
scattered clouds

Social Media

ಶನಿವಾರ, 25 ಜುಲೈ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

 

ಡಾ.ಪ್ರಮೀಳಾದೇವಿ ಬಿ.ಕೆ.
ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು ಧರಿಸುತ್ತಿದ್ದವರೇ. ಆದರೆ ಅವರು ಒಮ್ಮೇಲೆ ತಮ್ಮ ಉಡುಪಿನ ನಿಯಮ ಬದಲಾಯಿಸಿದ್ದಕ್ಕೆ ಪ್ರೇರಣೆಯಾದ ಕುತೂಹಲಕರಿಯಾದ ಹಿನ್ನೆಲೆಯೊಂದಿದೆ.

ಭಾರತಕ್ಕೆ ಬಂದ ಮೇಲೆ ಆಗಿನ ಪ್ರಸಿದ್ಧ ರಾಜಕೀಯ ಧುರೀಣರಾಗಿದ್ದ ಗೋಪಾಲಕೃಷ್ಣ ಗೋಖಲೆಯವರನ್ನು ನೋಡಲು ಹೋದರು. ತಮ್ಮ ಬಳಿ ಭಾರತದ ಅಂದಿನ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿಯಲು ಪ್ರಯತ್ನಿಸಿದ ಮೋಹನದಾಸರಿಗೆ ಗೋಖಲೆಯವರು ದೇಶವನ್ನು ಸ್ವತಂತ್ರ್ಯಗೊಳಿಸಲು ಹೋರಾಟಕ್ಕಿಳಿಯುವ ಮೊದಲು ದೇಶದ ಜನರ ನಿಜಸ್ಥಿತಿಯನ್ನು ಸರಿಯಾಗಿ ಅರಿತುಕೊಳ್ಳಲು ದೇಶದ ವಿವಿಧ ಭಾಗಗಳನ್ನು ಸಂಚರಿಸಿಬರುವಂತೆ ಹೇಳಿದರು.

ಗಾಂಧೀಜಿಯವರು ೧೯೧೫-೧೬ರಲ್ಲಿ ಪ್ರವಾಸ ಕೈಗೊಂಡಾಗ ಇಂದಿನಂತೆ ಉತ್ತಮ ರಸ್ತೆಗಳಾಗಲಿ, ರೈಲು ಮಾರ್ಗಗಳಾಗಲಿ ಇರಲಿಲ್ಲ. ಇದ್ದ ರೈಲುಗಳು ಉಗಿಬಂಡಿ ಅಂದರೆ ಸಾಕ್ಷಾತ್ ನೀರಿನ ಹಬೆಯಿಂದೊಡುತ್ತಿದ್ದ, ಆಗಾಗ ನಿಂತು, ನಿಂತು ಹೊರಡುತ್ತಿದ್ದ ರೈಲುಗಳು. ಗಾಂಧೀಜಿಯವರು ಆ ಸ್ಥಿತಿಯಲ್ಲೆಯೇ ಪ್ರವಾಸ ಮುಂದುವರೆಸಿ ಉತ್ತರ ಭಾರತದ ನಂತರ ದಕ್ಷಿಣ ಭಾರತಕ್ಕೆ ಬಂದರು. ತಮಿಳುನಾಡಿನಲ್ಲಿ ಅವರಿದ್ದ ರೈಲು ಚಲಿಸುತ್ತಿದ್ದಾಗ ನದಿಯೊಂದರ ಸೇತುವೆ ಮೇಲೆ ರೈಲು ಒಂದೆರಡು ಗಂಟೆಗಳ ಕಾಲ ನಿಂತುಬಿಟ್ಟಿತ್ತು. ಇದು ಅಂದಿನ ಸಾಮಾನ್ಯ ಸ್ಥಿತಿ. ಹಲವರು ಇಳಿದು ನದಿಯಲ್ಲಿ ಸ್ನಾನ ಮಾಡತೊಡಗಿದರು.

ಎಲ್ಲರಂತೆ ಗಾಂಧೀಜಿಯವರೂ ಕೂಡ ಆ ಸಮಯದಲ್ಲಿ ಸುತ್ತಲಿನ ಪ್ರಕೃತಿಯನ್ನು ಸವಿಯಲು ಇಳಿದರು. ಅವರು ಗಮನಿಸಿದಾಗ, ಅನತಿ ದೂರದಲ್ಲಿ ಮಹಿಳೆಯೊಬ್ಬಳು ನದಿಯಲ್ಲಿ ಇಳಿದು ಅತಿ ಸಂಕೋಚದಿಂದ ಸ್ನಾನಕ್ಕೆ ತೊಡಗಿದ್ದಳು. ಅವಳು ತಾನು ಉಟ್ಟಿದ್ದ ಸೀರೆಯನ್ನೇ ಅರ್ಧ ಭಾಗ ನದಿಯಲ್ಲಿ ತೊಳೆದು ಅದನ್ನೆ ಉಟ್ಟುಕ್ಕೊಂಡು ನಂತರ ಉಳಿದರ್ಧವನ್ನು ಬಿಚ್ಚಿ ನೀರಿನಲ್ಲಿ ಒಗೆಯಲಾರಂಭಿಸಿದಳು. ಬಹುಶಃ ಅವಳ ಬಳಿ ಇದ್ದದ್ದು ಅದೊಂದೆ ಸೀರೆ, ಬದಲಾಯಿಸಲು ಬೇರೆ ಸೀರೆಯಿದ್ದಂತಿರಲಿಲ್ಲ. ಇದು ಅಂದಿನ ಬಹುತೇಕ ಜನರ ಸ್ಥಿತಿ, ಕಡು ಬಡತನದ ಸ್ಥಿತಿ. ಜನರಿಗೆ ತೊಡಲು ಸಾಕಷ್ಟು ಬಟ್ಟೆಯೂ ಇರದೆ, ಅರೆಬರೆಯ ಉಡುಪು ಮಾತ್ರ ಇರುತ್ತಿತ್ತು. ಗಂಡುಮಕ್ಕಳಂತೂ ದೊಡ್ಡವರಾಗುವವರೆಗೂ ಪೂರ್ಣ ಬಟ್ಟೆಯನ್ನೇ ಕಾಣುತ್ತಿರಲಿಲ್ಲ., ಹೆಣ್ಣುಮಕ್ಕಳಿಗೂ ಅರೆಬರೆ ಬಟ್ಟೆಯೆ.

ಗಾಂಧೀಜಿಯವರಿಗೆ ಭಾರತದ ಜನರ ದಟ್ಟದರಿದ್ರತನ ಮತ್ತು ಸಂಕಟಗಳ ಅರಿವಾಯಿತು. ಇದು ಅವರು ಗೋಖಲೆಯವರ ಸಲಹೆಯಂತೆ ಮಾಡಿದ ಭಾರತದರ್ಶನ. ಈ ದೃಶ್ಯದಿಂದ ವಿಚಲಿತರಾದ ಗಾಂಽಜಿಯವರು ನೊಂದುಕ್ಕೊಂಡು, ಎಲ್ಲಿಯವರೆಗೆ ತಮ್ಮ ಜನರಿಗೆ ಇಂಥಹ ದುಃಸ್ಥಿತಿಯಿರುತ್ತದೋ ಅಲ್ಲಿಯವರೆಗೆ ತಾವೂ ಕೂಡ ದೇಹ ಮುಚ್ಚಿಕ್ಕೊಳ್ಳಲು ಅವಶ್ಯವಿದ್ದ ಎರಡು ತುಂಡು ಬಟ್ಟೆಯನ್ನು ಮಾತ್ರ ಧರಿಸುವುದಾಗಿ ನಿರ್ಧರಿಸಿದರು. ಎಂತಹ ಸನ್ನಿವೇಶ, ವಾತಾವರಣದಲ್ಲೂ ಅವರ ನಿರ್ಧಾರ ಬದಲಾಗುತ್ತಿರಲಿಲ್ಲ. ಅದರಂತೆಯೇ ನಡೆದು ತಾವು ಕ್ರೂರಹಂತಕನ ಗುಂಡಿಗೆ ಬಲಿಯಾಗಿ ಪ್ರಾಣಬಿಡುವವರೆಗೆ ಈ ನಿರ್ಧಾರವನ್ನೆ ಪಾಲಿಸಿದರು.

Tags:
error: Content is protected !!