Mysore
25
broken clouds

Social Media

ಶುಕ್ರವಾರ, 24 ಜುಲೈ 2026
Light
Dark

ಓದುಗರ ಪತ್ರ: ಮುಚ್ಚಿರುವ ಪಿಎಚ್‌ಸಿ ಕೇಂದ್ರ ತೆರೆಯುವುದು ಎಂದು?

dgp murder case

ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ. ಕೆಲವರು ಹೇಳುವಂತೆ, ಇದಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆ. ಮತ್ತೆ ಕೆಲವರು ಈ ಕಟ್ಟಡವು ಮೈಸೂರು ನಗರ ಪಾಲಿಕೆಯ ಕಟ್ಟಡವಾಗಿದ್ದು, ಇದನ್ನು ಮೈಸೂರು ನಗರ ಪಾಲಿಕೆಯು ಇದುವರೆಗೂ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡದ ಕಾರಣ, ಸದ್ಯಕ್ಕೆ ಬೀಗ ಹಾಕಲಾಗಿದೆ ಎನ್ನುತ್ತಿದ್ದಾರೆ.

ಕಾರಣ ಏನೇ ಇರಲಿ, ಇದರಿಂದ ಈ ಭಾಗದ ಸಾರ್ವಜನಿಕರಿಗೆ ಅದರಲ್ಲೂ ಅನಾರೋಗ್ಯಕ್ಕೆ ತುತ್ತಾದ ಹಿರಿಯ ನಾಗರಿಕರು, ಮತ್ತು ಮಹಿಳೆಯರಿಗೆ ತೀವ್ರ ಅನನುಕೂಲವಾಗಿದೆ. ಅನಾರೋಗ್ಯಕ್ಕೆ ತುತ್ತಾದವರು ಪಕ್ಕದ, ಜಯನಗರದ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಆಸ್ಪತ್ರೆಯ ಆವರಣ ಈಗ ದನ – ಕರುಗಳು, ನಾಯಿಗಳ ತಂಗುದಾಣವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತುರ್ತು ಗಮನ ಹರಿಸಿ, ಕೂಡಲೇ ಈ ಆರೋಗ್ಯ ಕೇಂದ್ರವನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು.

-ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!