ಎಚ್.ಡಿ.ಕೋಟೆ: ಕೇರಳ ವಯನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಒಂದೇ ದಿನಕ್ಕೆ ಅಂದರೆ 24 ಗಂಟೆಯಲ್ಲೇ ಕಬಿನಿ ಜಲಾಶಯಕ್ಕೆ ಆರು ಅಡಿ ನೀರು ಹರಿದು ಬಂದಿದ್ದು, 300 ಕ್ಯೂಸೆಕ್ಸ್ ಇದ್ದ ಒಳಹರಿವು ಆರು ಸಾವಿರಕ್ಕೆ ಹೆಚ್ಚಳವಾಗಿದೆ.
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 59 ಅಡಿಗೆ ಏರಿಕೆ ಕಂಡಿದೆ. ಕಬಿನಿ ಜಲಾಶಯದ ಒಟ್ಟು ಎತ್ತರ 84 ಅಡಿಗಳಾಗಿದೆ.
ಕಾಡು ಪ್ರಾಣಿಗಳ ಕುಡಿಯುವ ನೀರಿಗೂ ಈ ಜಲಾಶಯ ಆಶ್ರಯವಾಗಿದ್ದು, ತಮಿಳುನಾಡಿಗೆ ಈ ಜಲಾಶಯದಿಂದ ಅತಿಹೆಚ್ಚು ನೀರು ಬಿಡಲಾಗುತ್ತದೆ.





