Mysore
24
overcast clouds

Social Media

ಗುರುವಾರ, 18 ಜೂನ್ 2026
Light
Dark

ಓದುಗರ ಪತ್ರ: ಒಡೆಯರ್ ಪೋಸ್ಟ್ ಕಾರ್ಡ್ ಬಿಡುಗಡೆ ಶ್ಲಾಘನೀಯ

ಭಾರತೀಯ ಅಂಚೆ ಹಾಗೂ ಕರ್ನಾಟಕ ಅಂಚೆ ಚೀಟಿ ಸಂಗ್ರಹಣಾ ಸಂಘವು ಆಧುನಿಕ ಮೈಸೂರು ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿರುವ ಮೈಸೂರು ಒಡೆಯರ್ ಮನೆತನವನ್ನು ಸ್ಮರಿಸಿ, ಗೌರವಿಸಿ, ಮುಂದಿನ ತಲೆಮಾರಿಗೆ ಮೈಸೂರಿನ ಇತಿಹಾಸ, ಪರಂಪರೆಯನ್ನು ತಿಳಿಸುವ ದೃಷ್ಟಿಯಿಂದ ಒಡೆಯರ್ ಅವರುಗಳ ಪೋಸ್ಟ್ ಕಾರ್ಡ್ ಹೊರತಂದಿರುವುದು ಶ್ಲಾಘನೀಯ. ನಾಡ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಸಹಿತ ಅರಮನೆ ಹಾಗೂ ಮೈಸೂರು ಒಡೆಯರ್ ಸಂಸ್ಥಾನದ ಐವರು ಮಹಾನ್ ವ್ಯಕ್ತಿಗಳಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಹತ್ತನೇ ಚಾಮರಾಜ ಒಡೆಯರ್, ಮಹಾರಾಣಿಕೆಂಪುನಂಜಮ್ಮಣ್ಣಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರುಗಳು ಮೈಸೂರು ಸಂಸ್ಥಾನದ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ದೇಶಕ್ಕೆ ಪರಿಚಯಿಸುವ ದೃಷ್ಟಿಯಿಂದ ಮೈಸೂರಿನ ಹಿರಿಮೆ – ಗರಿಮೆಯನ್ನು ಗೌರವಿಸುವ ಮಹತ್ಕಾರ್ಯವನ್ನು ಮಾಡಿರುವ ಭಾರತೀಯ ಅಂಚೆ ಇಲಾಖೆಯ ಕೆಲಸ ಸ್ವಾಗತಾರ್ಹ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು

 

Tags:
error: Content is protected !!