Mysore
21
scattered clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಕೋವಿಡ್‌ಗಿಂತಲೂ ಡೆಡ್ಲಿ ಎಬೋಲಾ ವೈರಸ್:‌ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ

ನವದೆಹಲಿ: ಆಫ್ರಿಕಾದ ಹಲವು ಭಾಗಗಳಲ್ಲಿ ಕೋವಿಡ್‌ಗಿಂತಲೂ ಡೆಡ್ಲಿಯಾದ ಎಬೋಲಾ ವೈರಸ್‌ ಹಾವಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ.

ಈಗಾಗಲೇ ನವದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಬೋಲಾ ಕುರಿತು ಮಾಹಿತಿ ನೀಡಲಾಗಿದ್ದು, ಹೈರಿಸ್ಕ್‌ ದೇಶಗಳ ಪ್ರಯಾಣಿಕರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.

ಈ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ರಾಜ್ಯ ಆರೋಗ್ಯ ಇಲಾಖೆಗೆ ನೀಡಿರುವ ಸೂಚನೆಗಳು:
೧) ಕ್ವಾರಂಟೈನ್‌ ಸೆಂಟರ್‌ ಗುರುತು ಮಾಡಿ
೨) ಐಸೋಲೇಷನ್‌ ಸೌಲಭ್ಯ ಇರುವ ಕ್ವಾರಂಟೈನ್‌ ಸೆಂಟರ್‌
೩) ಹೆಲ್ತ್‌ ಸ್ಕ್ರೀನಿಂಗ್‌ಗೆ ಸಿಬ್ಬಂದಿಯನ್ನು ಹೆಚ್ಚಳ ಮಾಡಿಕೊಳ್ಳಿ
೪) ಶಂಕಿತ ಕೇಸ್‌ಗಳಿದ್ದರೆ ಆಸ್ಪತ್ರೆಗೆ ರವಾನಿಸಲು ಆಂಬುಲೆನ್ಸ್‌ ನಿಯೋಜಿಸಿ
೫) ಎಬೋಲಾ ಚಿಕಿತ್ಸೆ ಬಗ್ಗೆ ಹೆಲ್ತ್‌ ವರ್ಕರ್ಸ್‌ ಅರಿವು ಮೂಡಿಸುವಂತೆ ಸೂಚನೆ

ಎಬೋಲಾ ಬಂದ ರೋಗಿ ಅನುಸರಿಸಬೇಕಾದ ಕ್ರಮಗಳು:
೧) ಪ್ರತ್ಯೇಕ ಕೊಠಡಿಯಲ್ಲಿ ಐಸೊಲೇಟ್‌ ಆಗಬೇಕು
೨) ಬಾತ್‌ರೂಮ್‌ ಇರುವ ಕೊಠಡಿಯಲ್ಲಿ ಐಸೊಲೇಟ್‌ ಆಗಬೇಕು
೩) ಕೊಠಡಿ ಪ್ರವೇಶಕ್ಕೆ ಪಿಪಿಇ ಕಿಟ್‌ ಕಡ್ಡಾಯವಾಗಿ ಧರಿಸಬೇಕು
೪) ಪ್ರತಿ 2 ಗಂಟೆಗೆ ಒಮ್ಮೆ ಆಕ್ಸಿಜನ್‌ ರಕ್ತದ ಆಮ್ಲಜನಕ ಪರೀಕ್ಷಿಸಬೇಕು
೫) 2 ಗಂಟೆಗೆ ಒಮ್ಮೆ ಕಾರ್ಡಿಯಾಕ್‌ ಟೆಸ್ಟ್‌ ಆಗಬೇಕು

 

Tags:
error: Content is protected !!