Mysore
26
overcast clouds

Social Media

ಮಂಗಳವಾರ, 26 ಮೇ 2026
Light
Dark

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ; ಓರ್ವ ಸಾವು ಹಲವರಿಗೆ ಗಾಯ

ಜಕಾರ್ತಾ : ಇಂಡೋನೇಷ್ಯಾದ ಉತ್ತರ ಮೊಲುಕ್ಕಾ ಸಮುದ್ರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 7.4ರಷ್ಟು ತೀವ್ರತೆ ದಾಖಲಾಗಿದೆ.

ಭೂಮಿಯ ಆಳದಿಂದ ಸುಮಾರು 35 ಕಿಲೋಮೀಟರ್ ಕಂಪನ ಉಂಟಾಗಿದೆ. ಭೂಕಂಪವು ಉತ್ತರ ಸುಲಾವೇಸಿ, ಮನಾಡೋ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ತೀವ್ರ ಕಂಪನವನ್ನು ಉಂಟುಮಾಡಿದೆ.

ಸುನಾಮಿ ಎಚ್ಚರಿಕೆ
ಭೂಕಂಪದ ಬೆನ್ನಲ್ಲೇ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಇಂಡೋನೇಷ್ಯಾದ ಹವಾಮಾನ ಇಲಾಖೆ ಪ್ರಕಾರ 0.3 ರಿಂದ 0.75 ಮೀಟರ್ ಎತ್ತರದ ಸಣ್ಣ ಸುನಾಮಿ ಅಲೆಗಳು ಕೆಲವು ಸ್ಥಳಗಳಲ್ಲಿ ದಾಖಲಾಗಿವೆ.

Tags:
error: Content is protected !!