Mysore
22
overcast clouds

Social Media

ಶನಿವಾರ, 30 ಮೇ 2026
Light
Dark

ಚಂದಿರನತ್ತ ಮಾನವ: ಆರ್ಟೆಮಿಸ್‌-II ಮಿಷನ್‌ ಉಡಾವಣೆ ಯಶಸ್ವಿ

ಫ್ಲೋರಿಡಾ: 50 ವರ್ಷಗಳ ಬಳಿಕ ಚಂದಿರನ ಅನ್ವೇಷಣೆಗೆ ಹೊರಟಿರುವ ನಾಸಾ ಐತಿಹಾಸಿಕ ಆರ್ಟೆಮಿಸ್‌-II ಮಿಷನ್‌ ಉಡಾವಣೆ ಯಶಸ್ವಿಯಾಗಿದೆ.

ಅಮೇರಿಕಾದ ಕಾಲಮಾನ ಬುಧವಾರ ಸಂಜೆ 6.35ಕ್ಕೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳನ್ನು ಒರಾಯನ್‌ ಬಾಹ್ಯಾಕಾಶ ನೌಕೆಯನ್ನು ಅತ್ಯಂತ ಶಕ್ತಿಶಾಲಿ ಸ್ಪೇಸ್‌ ಲಾಂಚ್‌ ಸಿಸ್ಟಮ್‌ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.

ನೌಕೆಯು ಭೂಮಿಯ ಸುತ್ತ ತನ್ನ ಮೊದಲ ಕಕ್ಷೆಯಲ್ಲಿ ಸಂಚರಿಸಲಾರಂಭಿಸಿದ ಬಳಿಕ 10 ರಿಂದ 40 ನಿಮಿಷಗಳವರೆಗೆ ಗಗನಯಾತ್ರಿಗಳು ಮತ್ತು ನಾಸಾ ನಿಯಂತ್ರಣ ಕೇಂದ್ರವು ನೌಕೆಯ ಸೌರಫಲಗಳು ಸರಿಯಾಗಿ ತೆರೆದುಕೊಂಡಿವೆಯೇ ಎಂದು ಪರೀಕ್ಷಿಸಿದರು.

ಉಡಾವಣೆಯಾದ ಸುಮಾರು 8.5 ನಿಮಿಷಗಳ ನಂತರ ಎಸ್‌ಎಲ್‌ಎಸ್ ರಾಕೆಟ್‌ನ ಕೋರ್‌ ಸ್ಟೇಜ್‌ ಬೇರ್ಪಟ್ಟಿತು. ಈ ಸಮಯದಲ್ಲಿ ಒರಾಯನ್‌ ನೌಕೆಯು ತನ್ನ ಮೇಲಿನ ಹಂತವಾದ ಭೂಮಿಯ ಕೆಳ ಕಕ್ಷೆಯನ್ನು ತಲುಪಿತು.

 

Tags:
error: Content is protected !!