Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಮಂಡ್ಯ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಗ್ರಾಮಸ್ಥರಿಂದ ದೂರು

ಮಂಡ್ಯ: ಯುಗಾದಿ ಹಬ್ಬದ ದಿನ ಪಚ್ಚಿ ಆಟವಾಡುತ್ತಿದ್ದ ನೂರಾರು ಮಂದಿ ಮೇಲೆ ದಾಳಿ ನಡೆಸಿದ್ದೂ ಅಲ್ಲದೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಮಂಡ್ಯ ಗ್ರಾಮಾಂತರ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮಸ್ಥರು ದೂರು ನೀಡಿದ್ದಾರೆ.

ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಕೆ.ಸಿ.ಗಿರೀಶ್ ಎಂಬಾತನ ಮೇಲೆ ಯುಗಾದಿ ಹಬ್ಬದ ದಿನವಾದ ಮಾರ್ಚ್.19ರ ಗುರುವಾರ ಸಂಜೆ ಮಂಡ್ಯ ಗ್ರಾಮಾಂತರ ಠಾಣೆ ಪಿಎಸ್‌ಐ ರಸೂಲ್‌ ಸಾಬ್ ಗೌಂದಿ ಮತ್ತು ಸಿಬ್ಬಂದಿಗಳಾದ ಧನಂಜಯ, ಪ್ರಕಾಶ, ಕುಮಾರ ಅವರು ಹಲ್ಲೆ ನಡೆಸಿ ಆತನ ಮಂಡಿಚಿಪ್ಪು ಮುರಿದು ಹೋಗುವಂತೆ ಲಾಠಿಯಿಂದ ಒಡೆದಿದ್ದಾರೆ ಎಂದು ದೂರಿದ್ದಾರೆ.

 

Tags:
error: Content is protected !!