Mysore
25
broken clouds

Social Media

ಭಾನುವಾರ, 17 ಮೇ 2026
Light
Dark

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿದ ಮೊಜ್ತಾಬಾ? ದಾಳಿ ಬಗ್ಗೆ ಸಿಗದ ಸ್ಪಷ್ಟನೆ

ಟೆಹ್ರಾನ್ : ಇರಾನ್- ಇಸ್ರೇಲ್‌,‌ ಅಮೆರಿಕಾ ಯುದ್ಧ ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ತಂದೆ ಸಾವಿನ ಬಳಿಕ ನೇಮಕಗೊಂಡ ಇರಾನ್‌ ಸುಪ್ರೀಂ ಲೀಡರ್‌ ಮೊಜ್ತಾಬಾ ಖಮೇನಿ ಮೇಲೂ ವಾಯುದಾಳಿಯಾಗಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

56 ವರ್ಷದ ಮೊಜ್ತಾಬಾ ಖಮೇನಿ ಅವರು ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು, ಒಂದು ಕಾಲು ತುಂಡಾಗಿ ಕೋಮಾಗೆ ಜಾರಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ನಿಜವಾಗಿಯೂ ಖಮೇನಿ ಮೇಲೆ ವಾಯುದಾಳಿಯಾಗಿದ್ಯಾ? ದಾಳಿಯಾಗಿದ್ದರೆ ಅದು ಯಾವಾಗ ಎಂಬ ವಿಷಯದಲ್ಲಿ ಸ್ಪಷ್ಟತೆ ಇಲ್ಲದಾಗಿದೆ.

ಗಂಭೀರ ಗಾಯಗೊಂಡಿರುವ ಖಮೇನಿ ಅವರಿಗೆ ಟೆಹ್ರಾನ್‌ನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಬ್ರಿಟಿಷ್‌ ನಿಯತಕಾಲಿಯೊಂದು ವರದಿ ಮಾಡಿದೆ. ಇರಾನಿನಾದ್ಯಂತ ಇಂಟರ್‌ನೆಟ್‌ ಸಂಪರ್ಕಕ್ಕೆ ನಿರ್ಬಂದ ಇರುವುದರಿಂದ, ಮೊಜ್ತಬಾ ಅವರ ಆರೋಗ್ಯ ಮಾಹಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸಿ ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

Tags:
error: Content is protected !!