Mysore
24
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

90 ಅಡಿ ಬೋರ್‌ವೆಲ್‌ಗೆ ಬಿದ್ದಿದ್ದ ನಾಗರಹಾವು ರಕ್ಷಣೆ

ಮೈಸೂರು: 90 ಅಡಿ ಬೋರ್‌ವೆಲ್‌ಗೆ ಬಿದ್ದಿದ್ದ ನಾಗರಹಾವನ್ನು ರಕ್ಷಣೆ ಮಾಡುವಲ್ಲಿ ಉರಗ ಸಂರಕ್ಷಕ ಕೆಂಪರಾಜು ಯಶಸ್ವಿಯಾಗಿದ್ದಾರೆ.

ಮೈಸೂರಿನ ಇಲವಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯ ಬೋರ್ವೆಲ್ ಪೈಪ್ ಒಳಗೆ ನಾಗರಹಾವೊಂದು ಬಿದ್ದಿತ್ತು. ಹಾವು ಬೋರ್‌ವೆಲ್‌ ಪೈಪ್‌ ಒಳಗೆ ಹೋಗಿದ್ದನ್ನು ಗಮನಿಸಿದ ಮನೆಯವರು, ತಕ್ಷಣ ಉರಗ ಸಂರಕ್ಷಕ ಕೆಂಪರಾಜುಗೆ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ಕೆಂಪರಾಜು ಅವರು, ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೋರ್ವೆಲ್ ಪೈಪ್‌ನಿಂದ ನಾಗರಹಾವನ್ನು ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

 

Tags:
error: Content is protected !!