Mysore
20
clear sky

Social Media

ಶನಿವಾರ, 28 ಫೆಬ್ರವರಿ 2026
Light
Dark

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳ: ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿಸಿಲಿನ ಅಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ವರ್ಷ ಫೆಬ್ರವರಿಯಲ್ಲೇ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿ ದಾಖಲಾಗುತ್ತಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಉಷ್ಣಾಂಶದ ತೀವ್ರತೆ ಹೆಚ್ಚಿದೆ.

ಮಾರ್ಚ್‌ನಿಂದ ಮೇ 2026ರ ಅವಧಿಯಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಹೆಚ್ಚಿನ ತಾಪಮಾನ ಇರಲಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ಶಾಖದ ಅಲೆ ಉಂಟಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.

ಬಿಸಿಲಿನ ಬೇಗೆಯಿಂದ ಉಂಟಾಗಬಹುದಾದ ಶಾಖಾಘಾತ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?
೧) ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಗಾಳಿಯಾಡುವಂತಹ ಪಾದರಕ್ಷೆಗಳನ್ನು ಬಳಸಿ
೨) ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ. ಉಪ್ಪು-ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಮಜ್ಜಿಗೆ, ಎಳೆನೀರು ಮತ್ತು ಪಾನಕಗಳಿಗೆ ಆದ್ಯತೆ ನೀಡಿ.
೩) ಮನೆಯಲ್ಲಿ ತಯಾರಿಸಿದ ತಾಜಾ, ಸಾತ್ವಿಕ ಮತ್ತು ಕಡಿಮೆ ಮಸಾಲೆಯುಕ್ತ ಆಹಾರ ಸೇವಿಸಿ
೪) ಹೊರಗಡೆ ಹೋಗುವಾಗ ಕುಡಿಯುವ ನೀರಿನ ಬಾಟಲಿಯನ್ನು ತಪ್ಪದೇ ಜೊತೆಯಲ್ಲಿಟ್ಟುಕೊಳ್ಳಿ

ಶಾಖಾಘಾತಕ್ಕೊಳಗಾದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳು:

ಯಾರಾದರೂ ಬಿಸಿಲಿನಿಂದಾಗಿ ಪ್ರಜ್ಞೆ ತಪ್ಪಿದರೆ ಅಥವಾ ಅಸಂಬದ್ಧವಾಗಿ ಮಾತನಾಡುತ್ತಿದ್ದರೆ ತಕ್ಷಣ ಈ ಕ್ರಮ ಕೈಗೊಳ್ಳಿ

೧) ವ್ಯಕ್ತಿಯನ್ನು ತಕ್ಷಣ ನೆರಳಿರುವ ತಂಪಾದ ಜಾಗಕ್ಕೆ ಸ್ಥಳಾಂತರಿಸಿ
೨) ಕಾಲುಗಳನ್ನು ಸ್ವಲ್ಪ ಎತ್ತರದಲ್ಲಿರಿಸಿ ಮಲಗಿಸಿ ಮತ್ತು ಬಟ್ಟೆಗಳನ್ನು ಸಡಿಲಗೊಳಿಸಿ
೩) ಹಣೆ, ಕತ್ತು ಮತ್ತು ಪಾದಗಳನ್ನು ಸಾಮಾನ್ಯ ನೀರಿನಿಂದ ಒರೆಸಿ
೪) ಪರಿಸ್ಥಿತಿ ಗಂಭೀರವಾಗಿದ್ದರೆ ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ ಅಥವಾ ವೈದ್ಯರನ್ನು ಸಂಪರ್ಕಿಸಿ

 

Tags:
error: Content is protected !!