Mysore
27
overcast clouds

Social Media

ಭಾನುವಾರ, 02 ಆಗಸ್ಟ್ 2026
Light
Dark

ಓದುಗರ ಪತ್ರ | ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ, ರಾಮಕೃಷ್ಣ ವೃತ್ತದಿಂದ (ಆಂದೋಲನ ಸರ್ಕಲ್), ಕುವೆಂಪು ನಗರದ ಕಾಂಪ್ಲೆಕ್ ತನಕದ ಸುಮಾರು ಒಂದು ಕಿ.ಮೀ. ದೂರದ ಮಧ್ಯೆ ಭಾಗದಲ್ಲಿ ಎಲ್ಲೂ ಬಸ್ ತಂಗುದಾಣ ನಿರ್ಮಿಸಿಲ್ಲ. ಈ ಮುಖ್ಯ ರಸ್ತೆಯ ‘ಅಮ್ಮ ಕಾಂಪ್ಲೆಕ್ಸ್’ (ಮಾ‌ ಲ್ಯಾಬ್), ಮುಂಭಾಗದ ರಸ್ತೆಯಲ್ಲೇ ಬಿಸಿಲು ಮಳೆ ಗಾಳಿ ಚಳಿ ಎನದೇ, ಮರದ ಕೆಳಗೆ ನಗರ ಸಾರಿಗೆ ಬಸ್ಸಿಗಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಕಾಯುತ್ತಿರುತ್ತಾರೆ. ಇದು ಜನನಿಬಿಡ ಪ್ರದೇಶವಾಗಿರುವುದರಿಂದ ನೂರಾರು ಪ್ರಯಾಣಿಕರು ಇಲ್ಲಿಂದಲೇ ವಿವಿಧೆಡೆಗಳಿಗೆ ಪ್ರಯಾಣಿಸುತ್ತಾರೆ. ಈ ಮುಖ್ಯ ರಸ್ತೆಯ ಅಮ್ ಕಾಂಪ್ಲೆಕ್ಸ್ ಬಳಿ ಸಾಕಷ್ಟು ಜಾಗವೂ ಇರುವುದರಿಂದ ಇಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ನಗರ ಪಾಲಿಕೆಯ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!