ಮೈಸೂರು : ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಓಡೋಣ ಮೈಸೂರಿಗಾಗಿ ಒಂದಾಗೋಣ ಸ್ವಚ್ಛತೆಗಾಗಿ ಶೀರ್ಷಿಕೆಯಡಿ ಸ್ವಚ್ಚತಾ ಓಟ(ಮ್ಯಾರಥಾನ್)ದಲ್ಲಿ ಭಾಗವಹಿಸಿದ ಎಲ್ಲರೂ ಗಮನ ಸೆಳೆದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆದ 3, 5 ಮತ್ತು 10 ಕಿಲೋಮೀಟರ್ ಮ್ಯಾರಥಾನ್ ಗೆ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಚಾಲನೆ ನೀಡಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿಂದ ಆರಂಭವಾದ ಸ್ವಚ್ಚತಾ ಓಟ ಕೆ.ಆರ್.ಮಾರ್ಗವಾಗಿ ದೇವರಾಜ ಅರಸು ರಸ್ತೆ, ಜೆಎಲ್ ಬಿ ರಸ್ತೆ ಮೂಲಕ ರಾಮಸ್ವಾಮಿ ವೃತ್ತ ದಿಂದ ಚಾಮರಾಜ ಡಬಲ್ ರೋಡ್ ಮಾರ್ಗವಾಗಿ ಬಸವೇಶ್ವರ ವೃತ್ತ, ಅರಮನೆ ಎದುರಿನ ರಸ್ತೆ ಮೂಲಕ ಹಾರ್ಡಿಂಜ್ ವೃತ್ತದ ಮೂಲಕ ರಾಜ ಮಾರ್ಗದಲ್ಲಿ ಸಾಗಿ ದೊಡ್ಡಗಡಿಯಾರ ಸುತ್ತುವರಿದು ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಎದುರು ಮುಕ್ತಾಯವಾಯಿತು.
ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ನಮ್ಮ ನಮ್ಮ ಕೆಲಸವನ್ನು ನಾವೇ ಮಾಡಬೇಕು. ಸಾಮಾಜಿಕ ಜವಾಬ್ದಾರಿ ಅಲ್ಲಿ ಸ್ವಚ್ಛ ಮೈಸೂರು. ಪರಿಸರ ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತೆ, ಸ್ವಚ್ಚತೆ ಎಂದರೆ ಆನಂದ, ಮೈಸೂರು ಪ್ಯಾರಡೈಸ್ ಇದ್ದಂತೆ. ನಾವು ಮೈಸೂರಿಗರು ಎಂದು ಹೇಳಿಕೊಳ್ಳುವುದೇ ಹೆಮ್ಮೆ. ನಮ್ಮ ಆರೋಗ್ಯ ವೃದ್ಧಿಗೆ ಸ್ವಚ್ಚತೆ ಬಹಳ ಮುಖ್ಯ. ನಮ್ಮ ಮನೆಯಲ್ಲಿಯೇ ಅರಿವು ಮೂಡಿಸಬೇಕು. ಈ ಜಾಗೃತಿ ಮ್ಯಾರಾಥಾನ್ ನಮ್ಮಲ್ಲಿ ಜಾಗೃತಿ ಉಂಟು ಮಾಡಲಿ ಸ್ವಚ್ಛತೆಗೆ ದುಡಿಯೋಣ ಎಂದು ಕರೆ ನೀಡಿದರು.
ಶಾಸಕರಾದ ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಣ್ಮಿಕಾಂತ್ ರೆಡ್ಡಿ, ಡಿಐಜಿ ವಿಷ್ಣುವರ್ಧನ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಓ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಡಿಸಿಪಿ ಸುಂದರ್ ರಾಜ್, ಕೆಪಿಎ ಉಪ ನಿರ್ದೇಶಕ ಚನ್ನಬಸವಣ್ಣ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಜಿಎಸ್ ಎಸ್ ಮುಖ್ಯಸ್ಥ ಶ್ರೀಹರಿ ಸೇರಿದಂತೆ ಅನೇಕರು ಇದ್ದರು.
ರಿಸಲ್ಟ್…
3 ಕಿಮೀ ಓಟದಲ್ಲಿ ನಂದನ್ ತೃತೀಯ, ಮೊಹಮ್ಮದ್ ಉಮಾನ್ ದ್ವಿತೀಯ, ಪ್ರವೀಣ್ ಪ್ರಥಮ…
5 ಕಿಮೀ ಓಟದಲ್ಲಿ ನಿತಿನ್ ತೃತೀಯ, ಪುರುಷೋತ್ತಮ ದ್ವಿತೀಯ, ಪ್ರಥಮ್ ಪ್ರಥಮ…
18 ವರ್ಷದೊಳಗಿನ ವಿಭಾಗ ಶ್ರೇಯಸ್ ತೃತೀಯ, ವರುಣ್ ದ್ವಿತೀಯ, ಚಿರಂಜೀವಿ ಪ್ರಥಮ… ವಿಜೇತರಿಗೆ ಬಹುಮಾನವಾಗಿ ಸೈಕಲ್ ನೀಡಲಾಯಿತು..
5 ಕಿಮೀ ಓಟದಲ್ಲಿ 41 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಯೋಗೇಶ್ ಸಾಗರ್ ತೃತೀಯ, ರಘುನಂದನ್ ದ್ವಿತೀಯ, ಗಣೇಶ್ ಪ್ರಥಮ…
5 ಕಿಮೀ ಮಹಿಳೆಯರ (18-40) ವಿಭಾಗದಲ್ಲಿ ಎಲ್.ವಿದ್ಯಾ ತೃತೀಯ, ಚೈತ್ರ ದ್ವಿತೀಯ, ಆರ್.ಉಷಾ ಪ್ರಥಮ..
5 ಕಿಮೀ ಮಹಿಳೆಯರ 41 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಎಂ.ಮಾಲಿನಿ ತೃತೀಯ, ಎಂ.ಎಸ್.ಸರೋಜ ದ್ವಿತೀಯ, ಶಾಂತಕುಮಾರಿ ಪ್ರಥಮ….
10 ಕಿಮೀ ಓಟದಲ್ಲಿ (18-40) ಗಣಪತಿ ತೃತೀಯ, ಮಹೇಶ್ ದ್ವಿತೀಯ, ಗೋಪಿ ಸರೋಜ್ ಪ್ರಥಮ…
10 ಕಿಮೀ ಓಟದ ವಿಶೇಷಚೇತನರ ವಿಭಾಗದಲ್ಲಿ ಅಜಿತ್ ತೃತೀಯ, ಯುವರಾಜ್ ದ್ವಿತೀಯ, ಕೆ.ಬಸವರಾಜು ಪ್ರಥಮ…
10 ಕಿಮೀ ಓಟದ ಮಹಿಳೆಯರ ವಿಭಾಗದಲ್ಲಿ18-40) ಜಯಶ್ರೀ ತೃತೀಯ, ಹರ್ಷಿತ ದ್ವಿತೀಯ, ವಿಜಯಲಕ್ಷ್ಮಿ ಪ್ರಥಮ…
10 ಕಿಮೀ ಓಟದ 41 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ರೂಪರಮೇಶ್ ತಳವಾರ ತೃತೀಯ, ಮಾನಸ ದ್ವಿತೀಯ, ಉಮಾ ಪ್ರಥಮ…
10 ಕಿಮೀ ಓಟದಲ್ಲಿ 41 ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಮಹದೇವಸ್ವಾಮಿ ತೃತೀಯ, ಗೋಪಿಕೃಷ್ಣ ದ್ವಿತೀಯ, ದಶರಥ ಪ್ರಥಮ…
ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ ಮತ್ತು ತೃತೀಯ ಸ್ಥಾನ ಪಡೆದವರಿಗೆ 3 ಸಾವಿರ… ನಗದು ಬಹುಮಾನ…
ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಪ್ರೋತ್ಸಾಹಿಸಲಾಯಿತು. ಸ್ವಚ್ಛತಾ ಓಟ ಭಾಗವಹಿಸಿದವರಿಂದ ಸಹಿ ಸಂಗ್ರಹಿಸಲಾಯಿತು…





