Mysore
35
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣು

12 year boy suicide

ಮೈಸೂರು: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳನ್ನು ತಾಯಿ ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮಠದ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಹೇಮಲತಾ ಎಂಬುವವರೇ ತಮ್ಮ ಮಮಗಳು ಹಾಗೂ ಮಗನಿಗೆ ಹಗ್ಗದಿಂದ ನೇಣು ಬಿಗಿದು ಕೊಂದು, ಬಳಿಕ ತಾನೂ ಸಾವಿಗೆ ಶರಣಾಗಿದ್ದಾರೆ.

ಹೇಮಲತಾ ಅವರಿಗೆ ತಮ್ಮ ಪತಿ ಮಹದೇವ ಅವರೊಂದಿಗೆ ಕೌಟುಂಬಿಕ ವಿಚಾರದಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಭಾನುವಾರ ಕೂಡ ಮಹದೇವ ಅವರು ಗಲಾಟೆ ಮಾಡಿದ್ದಾರೆ. ಇದರಿಂದ ಬೇಸತ್ತ ಹೇಮಲತಾ ತಮ್ಮ ತಂಬಾಕು ಬ್ಯಾರಲ್‌ ಮನೆಗೆ ತೆರಳಿ ಮನೆಯ ಕಂಬಕ್ಕೆ ನೇಣಿನ ಕುಣಿಕೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!