Mysore
19
mist

Social Media

ಬುಧವಾರ, 07 ಜನವರಿ 2026
Light
Dark

ಮೈಸೂರು ವಿ.ವಿ106ನೇ ಘಟಿಕೋತ್ಸವ ಸಂಭ್ರಮ : ರಾಜೇಂದ್ರ ಸಿಂಗ್‌ ಬಾಬು ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

ಮೈಸೂರು : ಶತಮಾನ ಪೂರೈಸಿರುವ ಪ್ರತಿಷ್ಠತಿ ಮೈಸೂರು ವಿಶ್ವವಿದ್ಯಾನಿಲಯವು 106ನೇ ಘಟಿಕೋತ್ಸವದ ಸಂಭ್ರಮದಲ್ಲಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್‌ ಭವನದಲ್ಲಿ ಜನವರಿ 5 ರಂದು(ಸೋಮವಾರ) ಪ್ರತಿಭಾರಿಯಂತೆಯೂ ಈ ಬಾರಿಯೂ ಸಾಧಕರಿಗೆ ಗೌರವ ಡಾಕ್ಟರೇಟ್‌ ನೀಡಲು ತಯಾರಿ ಮಾಡಿಕೊಂಡಿದೆ. ಅಂತೆಯ ಮೂವರು ಸಾಧಕರಿಗೆ ಡಾಕ್ಟರೇಟ್‌ ಕೊಡಲು ವಿ.ವಿ ನಿರ್ಧರಿಸಿದೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರು ಮೈಸೂರು ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಬಂಧನ, ಮುತ್ತಿನಹಾರ, ಬಣ್ಣದ ಗೆಜ್ಜೆ, ಅಂತ, ಕಾಂಚನ ಗಂಗಾ ಸೇರಿದಂತೆ ಅನೇಕ ಕ್ಲಾಸಿಕ್‌ ಚಿತ್ರಗಳನ್ನು ನೀಡಿದ ದಾರ್ಶನಿಕ ನಿರ್ದೇಶಕ ಬಾಬು ಅವರು ಐದು ದಶಕಗಳ ಕಾಲ ಚಂದನವನ್ನು ಶ್ರೀಮಂತಗೊಳಿಸಿದ್ದರು. ಇವರ ಕಲಾತ್ಮಕಕ್ಕೆ ಮೈಸೂರು ಮಣ್ಣಿನ ಗೌರವ ಒಲಿದಿದೆ.

ಇವರ ಜೊತೆಗೆ ಹಿರಿಯ ಐಎಎಸ್‌ ಅಧಿಕಾರಿ ಡಾ.ಟಿ.ಶಾಮ್‌ ಭಟ್‌ ಹಾಗೂ ಶಿಕ್ಷಣ ತಜ್ಞರು ಹಾಗೂ ಪರಿಸರವಾದಿಯೂ ಆದ ಪಿ.ಜಯಚಂದ್ರ ರಾಜು ಅವರಿಗೆ ಗೌರವ ಡಾಕ್ಟರೇಟ್‌ ಒಲಿದಿದೆ.

Tags:
error: Content is protected !!