Mysore
20
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕನ್ನಡ ನಾಡು ನುಡಿ ನಮ್ಮ ಹೆಮ್ಮೆ : ಹಾಡಿ ಹೊಗಳಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಕನ್ನಡ ನಾಡು-ನುಡಿ ನಮ್ಮ ಹೆಮ್ಮೆ, ಕನ್ನಡ ಭೂಮಿ ನಮ್ಮ ಹೆಮ್ಮೆಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘಿಸಿದ ಅವರು, ದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ವಾಸವಿದ್ದಾರೆ. ದುಬೈ ಕನ್ನಡಿಗರು ತಮ್ಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡರೂ ನಮ್ಮ ಮಕ್ಕಳು ಟೆಕ್‌ವಲ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ್ಮ ನೆಲದ ಭಾಷೆ ಕನ್ನಡದಿಂದ ದೂರ ಆಗುತ್ತಿದ್ದಾರೆಯೇ ಎಂಬ ಆತಂಕ ದುಬೈ ಕನ್ನಡಿಗರಿಗೆ ಬಂತು. ಆಗಿನಿಂದಲೇ ಅವರು ದುಬೈನಲ್ಲಿ ಕನ್ನಡ ಪಾಠಶಾಲೆ ಆರಂಭ ಮಾಡಿದರು ಎಂದು ನೆನೆಪಿಸಿದರು.

ಇದನ್ನು ಓದಿ: ಕಾಂಗ್ರೆಸ್ಸೇ ಅಹಿಂದ : ಸಿಎಂ ಸಿದ್ದರಾಮಯ್ಯಗೆ ಹಳ್ಳಿಹಕ್ಕಿ ವಿಶ್ವನಾಥ್‌ ಟಾಂಗ್‌

ಕನ್ನಡ ಪಾಠಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸುತ್ತಿದ್ದಾರೆ, ಕನ್ನಡ ಓದು, ಬರಹ, ಮಾತನಾಡುವುದು ಕಲಿಸುತ್ತಿದ್ದಾರೆ. ಈಗ ಆ ಪಾಠಶಾಲೆಯಲ್ಲಿ ಒಂದು ಸಾವಿರ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಕೆಲಸವಾಗುತ್ತಿದೆ. ಈ ಮೂಲಕ ದುಬೈನಲ್ಲಿ ಇರುವ ಕನ್ನಡಿಗರು ಭಾಷಾಭಿಮಾನ ಮೆರೆಯುತ್ತಿದ್ದಾರೆ ಎಂದರು.

ಮನ್‌ಕೀ ಬಾತ್‌ನಲ್ಲಿ ಮೋದಿ ಅವರು, ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಕಾರ್ಯ ಚಟುವಟಿಕೆಗಳ ಬಗ್ಗೆ ಹೊಗಳಿದ್ದು ವಿಶೇಷವಾಗಿತ್ತು. ಐಐಎಸ್‌ಸಿಯಲ್ಲಿ ಕೇವಲ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವ ಸಂಗೀತ ತರಗತಿಗಳನ್ನು ನಡೆಸಲಾಗುತ್ತಿದೆ. ವಿಜ್ಞಾನದ ಜತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಸಲಾಗುತ್ತದೆ. ವಿಜ್ಞಾನ ಮತ್ತು ಸಂಗೀತ ಹೇಗೆ ಒಟ್ಟಿಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದರು.

Tags:
error: Content is protected !!