ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ೫೭,೭೩೩ ಸೈಬರ್ ಪ್ರಕರಣಗಳು ದಾಖಲಾಗಿದ್ದು, ೫,೪೭೫ ಕೋಟಿ ರೂ. ವಂಚನೆ ನಡೆದಿರುವುದಾಗಿ, ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ,
ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಅಧಿಕೃತವಾಗಿ ದಾಖಲಾಗಿರುವ ಪ್ರಕರಣಗಳು, ಆದರೆ ಕೆಲವು ಪ್ರಕರಣಗಳು ದಾಖಲಾಗುವುದೇ ಇಲ್ಲ. ಸೈಬರ್ ಪ್ರಕರಣಗಳಲ್ಲಿ ಹೆಚ್ಚು ಮೋಸ ಹೋಗುತ್ತಿರುವವರು ಗೃಹಿಣಿಯರು ಮತ್ತು ಹಿರಿಯ ನಾಗರಿಕರು, ಹಾಗೂ ವಿದ್ಯಾವಂತರೇ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ.
ಸೈಬರ್ ವಂಚನೆ ಪ್ರಕರಣಗಳಿಂದ ಪಾರಾಗಲು ಸಾರ್ವಜನಿಕರು ಬ್ಯಾಂಕ್‌ನ ತಮ್ಮ ಉಳಿತಾಯ ಖಾತೆಯಲ್ಲಿ ತಿಂಗಳ ಅಗತ್ಯಕ್ಕೆ ತಕ್ಕಷ್ಟು ಹಣ ಮಾತ್ರ ಇಟ್ಟುಕೊಂಡು,ಉಳಿಕೆ ಹಣವನ್ನು ಅದೇ ಬ್ಯಾಂಕ್ ನಲ್ಲಿ ಎಂಒಡಿ (ಮಲ್ಟಿಪಲ್ ಆಪ್ಷನ್)ಗೆ, ವರ್ಗಾಯಿಸಬೇಕು. ಈ ಹಣಕ್ಕೆ ಠೇವಣಿಗಳ ಮೇಲಿನ ಬಡ್ಡಿಯಂತಯೇ ಈ ಹಣಕ್ಕೆ ಬಡ್ಡಿಯೂ ಬರುತ್ತದೆ, ಹಾಗೂ ಯಾವಾಗ ಬೇಕಾದರೂ ಈ ಹಣವನ್ನು ಹಿಂತೆಗೆಯಲೂ ಬಹುದು, ಈ ಬಗ್ಗೆ ಎಲ್ಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಸಲಹೆ ಸೂಚನೆಯನ್ನು ನೀಡಬೇಕು. ಸೈಬರ್ ಪ್ರಕರಣಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ದೇಶಾದ್ಯಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು





