ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪ್ರಾರ್ಥನಾ ಮಂದಿರದಲ್ಲಿ ನಡೆಯಿತು.
ಹೊಸಮಠದ ಶ್ರೀಗಳಾದ ಶ್ರೀ ಬಸವರಾಜೇಂದ್ರ ಶ್ರೀಗಳಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಎಂಎಲ್ ಹುಂಡಿ ಶ್ರೀಗಳಾದ ಶ್ರೀ ಗೌರಿಶಂಕರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಇದನ್ನು ಓದಿ: ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್
ವಿಶ್ವವಚನ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವಚನ ಕುಮಾರಸ್ವಾಮಿ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಲೋಕಕಲ್ಯಾಣ ದಿವ್ಯ ದೂರ ದೃಷ್ಟಿ ಹಾಗೂ ಚಿಂತನೆಯ ಬಗ್ಗೆ ವಚನಗಳ ಮುಖೇನ ಪ್ರವಚನ ನೀಡಿದರು.
ಗೌರಿಶಂಕರ ಶ್ರೀಗಳು ಮಾತನಾಡಿ, ಮಠಮಾನ್ಯಗಳಲ್ಲಿ ವಿದ್ಯಾಭ್ಯಾಸ ಮಾಡಿದವರು ಐಎಎಸ್, ಕೆಎಎಸ್ ಇನ್ನಿತರ ಉನ್ನತ ಮಟ್ಟದ ಅಧಿಕಾರವನ್ನು ಅಲಂಕರಿಸಿದ್ದಾರೆ. ಅದಕ್ಕೆ ಬುನಾದಿ ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಎಂದು ಹೇಳಿದರು.





