Mysore
14
broken clouds

Social Media

ಗುರುವಾರ, 22 ಜನವರಿ 2026
Light
Dark

ನಿರ್ಮಲ ಸೀತಾರಾಮನ್‌ಗೂ ಡೀಪ್ ಫೇಕ್‌ ಕಾಟ ; ಎಫ್‌ಐಆರ್‌ ದಾಖಲು

ಬೆಂಗಳೂರು : ಈ ಹಿಂದೆ ನಟ-ನಟಿಯರ ಫೋಟೋಗಳನ್ನು ಡೀಪ್ ಫೇಕ್ ಮಾಡಿ ಸೋಶಿಯಲ್​​ ಮೀಡಿಯಾದಲ್ಲಿ ಹರಿಬಿಡಲಾಗುತ್ತಿತ್ತು. ಆದರೆ, ಇದೀಗ ಅದು ರಾಜಕಾರಣಿಗಳೂ ತಟ್ಟಿದ್ದು, ಮತ್ತೆ ಇದರ ಟ್ರೆಂಡ್​​​ ಶುರುವಾಗಿದೆ. ಈ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟಾರ್ಗೆಟ್​​ ಆಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂ ಪೋಲಿಸ್‌  ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಣಕಾಸು ಹೂಡಿಕೆ ಯೋಜನೆ ಉದ್ದೇಶಿಸಿ ಮಾತನಾಡಿರುವ ವೀಡಿಯೋವನ್ನು ಎಡಿಟ್​​ ಮಾಡಿ ಸಾಮಾಜಿಕ ಜಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸುಳ್ಳು ಡೀಪ್ ಫೇಕ್ ವೀಡಿಯೋ ಮಾಡಿ ಸಾರ್ವಜನಿಕರಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಇದೀಗ ಈ ಬಗ್ಗೆ ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಇದನ್ನು ಓದಿ: ಮಲ್ಲಿಕಾರ್ಜುನ ಖರ್ಗೆ ಭುಜಕ್ಕೆ ಮಸಾಜ್‌ ಮಾಡಿದ ರಾಹುಲ್‌ ಗಾಂಧಿ! ವಿಡಿಯೊ ವೈರಲ್‌… ಇಂಟರ್‌ನೆಟ್‌ ಓದುಗರಿಂದಲೂ ಪ್ರಶಂಸೆ…

ಭಾರತದ ಹಣಕಾಸು ಸಚಿವರಾದ ನಿರ್ಮಾಲಾ ಸೀತಾರಾಮನ್​​​​ ಅವರ ವಿಡಿಯೋವನ್ನು ಡೀಪ್ ಫೇಕ್ ಮಾಡಿ, ಫೇಸ್​​​ ಬುಕ್​​ನಲ್ಲಿ ಹಂಚಿಕೊಂಡಿದ್ದಾರೆ ಎಂದು ಮಲ್ಲೇಶ್ವರಂ ಪೊಲೀಸ್​​ ಠಾಣೆಯ ಸಬ್​​​​​​ ಇನ್ಸ್​ಪೆಕ್ಟರ್​​​​​ ರಮೇಶ್​​​​ ಎಸ್​​ ಅವರು ದೂರು ನೀಡಿದ್ದಾರೆ. ಹಣಕಾಸಿನ ಹೂಡಿಕೆ ಯೋಜನೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋವನ್ನು ಡೀಪ್​​​​​​​ ಫೇಕ್​​ ಮಾಡಿ ಅದನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಜನರಿಗೆ ತಪ್ಪು ಮಾಹಿತಿ ಹೋಗುತ್ತಿದೆ. ಹೂಡಿಕೆ ಮಾಡುವ ವ್ಯಕ್ತಿಗೆ ಇದು ಆರ್ಥಿಕ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ. ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಈ ಕೃತ್ಯದಲ್ಲಿ ಶಾಮೀಲಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಈ ಎಫ್ಐಆರ್​​ನಲ್ಲಿ ತಿಳಿಸಿದ್ದಾರೆ.

Tags:
error: Content is protected !!