ಮೈಸೂರು : ನಗರದ ರಂಗವಲ್ಲಿ ಸಂಸ್ಥೆ ವತಿಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಡಿ.೬ರಂದು ಸಂಜೆ ೬.೩೦ಗಂಟೆಗೆ ‘ಪರಮೇಶಿ ಪ್ರೇಮಪ್ರಸಂಗ’ ಹಾಸ್ಯ ನಾಟಕವನ್ನು ಪ್ರಸ್ತುತಪಡಿಸಲಾಗುವುದು. ರಂಗ ನಿರ್ದೇಶಕ ಶ್ರೀನಿವಾಸ ಪ್ರಭು ಅವರು ರಚಿಸಿರುವ ಈ ನಾಟಕವನ್ನು ರವಿಪ್ರಸಾದ್ ನಿರ್ದೇಶಿಸಿದ್ದಾರೆ.
ಪ್ರೇಮಪಾಶದಲ್ಲಿ ಸಿಕ್ಕಿಕೊಂಡು ವಿಲವಿಲನೆ ಒದ್ದಾಡುತ್ತಿರುವ ಪರಮೇಶಿ ಮತ್ತು ಕೃಷ್ಣೋಜಿ ಎಂಬ ಗೆಳೆಯರು ಅನುಭವಿಸುವ ನಾನಾ ಬಗೆಯ ಪೇಚುಗಳನ್ನು ಈ ಪ್ರಹಸನ ತಿಳಿಹಾಸ್ಯದ ಪಾತಳಿಯಲ್ಲಿ ಬಿಚ್ಚಿಡುತ್ತದೆ. ಇಂಗ್ಲಿಷ್ ಲೇಖಕ, ವುಡ್ ಹೌಸ್ ಕೃತಿಯಿಂದ ಪ್ರೇರೇಪಿತವಾದ, ಶ್ರೀನಿವಾಸ ಪ್ರಭು ಅವರ ರಚನೆಯ ಈ ಪ್ರೇಮ ಪ್ರಸಂಗಕ್ಕೆ ಹೆಸರಾಂತ ವಿನ್ಯಾಸಕಾರ ಹೆಚ್.ಕೆ.ದ್ವಾರಕನಾಥ್ ರಂಗವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸ – ಮಧು ನೀನಾಸಂ, ಸಂಗೀತ ನಿರ್ವಹಣೆ- ಮಂಜು ಮಂಗಲ, ಪ್ರಸಾದನ- ರಾಘವೇಂದ್ರ ಬೂದನೂರ್ ಹಾಗೂ ಹರಿಪ್ರಸಾದ್ ವಸ್ತ್ರ ವಿನ್ಯಾಸ ಮಾಡಿರುತ್ತಾರೆ. ಈ ನಾಟಕಕ್ಕೆ ರೂ.೧೦೦-೦೦ ಪ್ರವೇಶಧನ ನಿಗದಿಪಡಿಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9964656482 ಸಂಪರ್ಕಿಸಬಹುದು.





