Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

‘ಕಾಂತಾರ – ಚಾಪ್ಟರ್ 1’ ಯಶಸ್ಸು; ಕೇಕ್‍ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರವು ಅಕ್ಟೋಬರ್ 02ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವು 883 ಪ್ಲಸ್‍ ಕೋಟಿ ರೂ. ಗಳಿಗೆ ಮಾಡಿದೆ ಎಂದು ಚಿತ್ರತಂಡ ಘೋಷಿಸಿಕೊಂಡಿದೆ.

ಈ ಮಧ್ಯೆ, ಚಿತ್ರತಂಡದವರೆಲ್ಲಾ ಶನಿವಾರ ರಾತ್ರಿ, ಬೆಂಗಳೂರಿನ ವರ್ಲ್ಡ್ ಟ್ರೇಡ್‍ ಸೆಂಟರ್‍ನ 31ನೇ ಮಹಡಿಯಲ್ಲಿರುವ ಹೈ ಅಲ್ಟ್ರಾ ಲೌಂಜ್‍ ರೆಸ್ಟೋರೆಂಟ್‍ನಲ್ಲಿ ಸೇರಿ ಚಿತ್ರ ಗೆದ್ದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಿಷಭ್‍, ವಿಜಯ್‍ ಕಿರಗಂದೂರು, ಗುಲ್ಶನ್‍ ದೇವಯ್ಯ, ರುಕ್ಮಿಣಿ ವಸಂತ್‍, ಛಾಯಾಗ್ರಾಹಕ ಅರವಿಂದ್‍ ಕಶ್ಯಪ್‍ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನು ಓದಿ: ಕನ್ನಡದ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾದ ‘ಕಾಂತಾರ – ಚಾಪ್ಟರ್ 1’

ಕನ್ನಡದಲ್ಲಿ ಇದುವರೆಗೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಯಶ್‍ ಅಭಿನಯದ ‘ಕೆಜಿಎಫ್‍ – ಚಾಪ್ಟರ್ 2’ ಮತ್ತು ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಗಳಿದ್ದವು. ಈಗ ಆ ದಾಖಲೆಯನ್ನು ‘ಕಾಂತಾರ – ಚಾಪ್ಟರ್ 1’ ಮುರಿದಿದೆ. ಚಿತ್ರವು ಕರ್ನಾಟಕದಲ್ಲಿ 268 ಕೋಟಿ ರೂ. ಗಳಿಕೆ ಮಾಡಿದ್ದು, ರಾಜ್ಯದಲ್ಲಿ 200 ಕೋಟಿ ರೂ. ಗಡಿ ದಾಟಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬರೀ ಕರ್ನಾಟಕವಷ್ಟೇ ಅಲ್ಲ, ಚಿತ್ರ ಬಿಡುಗಡೆಯಾದ ಬೇರೆ ಕಡೆಗಳಲ್ಲೂ ಹೊಸ ದಾಖಲೆಯನ್ನೇ ಮಾಡಿದೆ. ಚಿತ್ರವು ಜಾಗತಿಕವಾಗಿ 883 ಕೋಟಿ ರೂ. ಗಳಿಗೆ ಮಾಡುವ ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಇದಕ್ಕೂ ಮೊದಲು ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ವಿಕ್ಕಿ ಕೌಶಾಲ್‍ ಅಭಿನಯದ ‘ಛಾವಾ’ ಚಿತ್ರವಿತ್ತು. ಅದರ ಗಳಿಕೆಯನ್ನು ‘ಕಾಂತಾರ – ಚಾಪ್ಟರ್ 1’ ಮುರಿದಿದೆ.

‘ಕಾಂತಾರ – ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ ನಿರ್ಮಿಸಿದ್ದು, ರಿಷಭ್‍ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್‍, ಅಚ್ಯುತ್‍ ಕುಮಾರ್, ಗುಲ್ಶನ್‍ ದೇವಯ್ಯ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತವಿದೆ.

Tags:
error: Content is protected !!