ಬೆಂಗಳೂರು: ನಟ ದರ್ಶನ್ ಅವರು ದಿಂಬು, ಹಾಸಿಗೆಗೆ ಕೋರ್ಟ್‌ನಲ್ಲಿ ಮನವಿ ಮಾಡುತ್ತಾರೆ. ಆದರೆ ಈ ಖೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಜೈಲಿನ ಅವ್ಯವಸ್ಥೆ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.
ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪದೇ ಪದೇ ಹೀಗಾಗುತ್ತದೆ ಎಂದು ಹಿಂದೆಯೂ ಕ್ರಮ ತೆಗೆದುಕೊಂಡಿದ್ದೆವು. ದಯಾನಂದ್ ಅವರ ಜೊತೆ ನಿನ್ನೆ ಮಾತನಾಡಿದ್ದೇನೆ. ಪದೇ ಪದೇ ಇದು ನಡೆಯುತ್ತಿದೆ. ಯಾರು ಉಸ್ತುವಾರಿ ಇದ್ದಾರೆ ಅವರ ವಿರುದ್ಧ ಕ್ರಮ ಆಗಲೇಬೇಕು.
ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು, ದಯಾನಂದ್ ಅವರಿಂದ ವರದಿ ಕೇಳಿದ್ದೇನೆ. ನಾನೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ದಯಾನಂದ್ ಅವರು ವರದಿ ಕೊಟ್ಟಮೇಲೆ ಪರಿಶೀಲನೆ ನಡೆಸುತ್ತೇನೆ. ವರದಿ ನಮಗೆ ಸಮಾಧಾನ ಆಗದೇ ಇದ್ದರೆ ಉನ್ನತ ಮಟ್ಟದ ತನಿಖೆ ಮಾಡುತ್ತೇವೆ. ತನಿಖೆಗೆ ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.





