ಮಳವಳ್ಳಿ : ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಪೇದೆ ವೆಂಕಟೇಶ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ಊರಿನ ನ್ಯಾಯ ಸಂಬಂಧ ವ್ಯಾಜ್ಯದ ಬಗ್ಗೆ 10 ಸಾವಿರ ರೂ.ಗಳನ್ನು ನೀಡಬೇಕೆಂದು ನವೀನ್ ಎಂಬವರಿಗೆ ಮುಖ್ಯ ಪೇದೆ ವೆಂಕಟೇಶ್ ಧಮ್ಕಿ ಹಾಕುತ್ತಿದ್ದರು ಎನ್ನಲಾಗಿದೆ. ಇದರಿಂದ ನವೀನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇದನ್ನೂ ಓದಿ:-ಆನೆ,ಚಿರತೆ,ಹುಲಿ ದಾಳಿ ಬಳಿಕ ಹಂದಿ ಕಾಟ : ಕಾಡು ಹಂದಿ ದಾಳಿಗೆ ರೈತ ಬಲಿ
ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆ ಎದುರಿನಲ್ಲಿರುವ ಜ್ಯೂಸ್ ಬರ್ಗ್ ಅಂಗಡಿಯಲ್ಲಿ ಗುರುವಾರ ಸಂಜೆ ಪೇದೆ ವೆಂಕಟೇಶ್ ಅವರು 5 ಸಾವಿರ ರೂ. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಡಿವೈಎಸ್‌ಪಿ ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬ್ಯಾಟರಾಯಗೌಡ ಮತ್ತು ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿ ಹಾಜರಿದ್ದರು.





