Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನಿಮಗಿನ್ನ ವೀರಪ್ಪನ್ ವಾಸಿ : ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಚಾಮರಾಜನಗರ : ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಚಾಮರಾಜನಗರದ ಕೆಡಿಪಿ ಸಭಾಂಗಣದಲ್ಲಿ ಭಾನುವಾರ ಮಹತ್ವದ ಸಭೆ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಈ ಸಭೆ ನಡೆಸಲಾಗಿದ್ದು, ಎರಡು ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಚರ್ಚಿಸಲಾಗಿದೆ.

ಈ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ಹೊರಹಾಕಿದರು. ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಬೇರೆ ಯಾವುದೇ ರಾಜ್ಯದಲ್ಲೂ ಇಷ್ಟು ‌ಪ್ರಾಣಿ‌ ಹಾಗೂ ಮಾನವ ಸಂಘರ್ಷವಾಗುತ್ತಿಲ್ಲ. ನಮ್ಮಲ್ಲಿ ಮಾತ್ರ ಹೆಚ್ಚುತ್ತಿದೆ. ಇದಕ್ಕೆ ಅರಣ್ಯಾಧಿಕಾರಿಗಳ ಸಂಪೂರ್ಣ ‌ನಿರ್ಲಕ್ಷ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಓದಿ: ಸುರಂಗ ರಸ್ತೆ ಯೋಜನೆಯಿಂದ ಆರ್ಥಿಕ ಸ್ಥಿತಿ ಪಾತಾಳಕ್ಕೆ : ಆರ್‌.ಅಶೋಕ ಆಕ್ರೋಶ

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಕಷ್ಟು ಅಕ್ರಮ ರೆಸಾರ್ಟ್​ಗಳು‌ ನಡೆಯುತ್ತಿವೆ. ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಅಕ್ರಮ ಗಣಿಗಾರಿಕೆ-ರೆಸಾರ್ಟ್​ಗಳು ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗಿಂತ ವೀರಪ್ಪನ್ ಪರವಾಗಿರಲಿಲ್ಲ ಎಂದು ರೈತರು ಸಿಡಿಮಿಡಿಗೊಂಡರು.

ಪ್ರಾಣಿಯಿಂದ ಮನುಷ್ಯರು ಸತ್ತಾಗ ಸಚಿವರು, ಶಾಸಕರು, ಡಿಸಿಎಫ್​ಗಳ ಮೇಲೆ ಕೇಸು ಹಾಕಬೇಕು. ಇಷ್ಟು ಹುಲಿ ಹಾಗೂ ಮನುಷ್ಯರ ಸಾವಿಗೆ ಅಧಿಕಾರಿಗಳು ಹಾಗೂ ಅರಣ್ಯ ಸಚಿವರೇ ಕಾರಣ. ಈಗಾಗಲೇ ಅರಣ್ಯ ಸಚಿವರು ರಾಜೀನಾಮೆ ನೀಡಬೇಕಿತ್ತು. ಮೊದಲೇ ಸರಿಯಾದ ಸಭೆ ನಡೆಸಿ ಕ್ರಮ ಕೈಗೊಂಡಿದ್ದರೆ ಯಾವ ಸಾವೂ ಆಗುತ್ತಿರಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ಕೆ.ವೆಂಕಟೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ದರ್ಶನ್ ಧ್ರುವನಾರಾಯಣ್, ಎಂಎಲ್​ಸಿ ಮಂಜೇಗೌಡ ಹಾಗೂ ಅರಣ್ಯ ಇಲಾಖೆ ಪಿಸಿಸಿಎಫ್​ಗಳು ಸೇರಿ ಉನ್ನತಾಧಿಕಾರಿಗಳು ಮತ್ತು ರೈತ ಮುಖಂಡರು ಸಭೆಯಲ್ಲಿ ಭಾಗಿಯಾದರು.

Tags:
error: Content is protected !!