ಮೈಸೂರು : ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಕಾರ್ಡ್ ದಾರರಿಗೆ ಎಣ್ಣೆ, ಬೆಳೆ ಕಾಳುಗಳನ್ನು ವಿತರಿಸಲಾಗುವುದು ಎಂದು ಆಹಾರ ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಏರ್ಪಡಿಸಲಾಗಿದ್ದ ಆಹಾರ ಮಳಿಗೆಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಈಗಾಗಲೇ ಬಿಪಿಎಲ್ ಕಾರ್ಡ್ ದಾರರಿಗೆ ತಲಾ 10ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು ಅದರಲ್ಲಿ 5ಕೆಜಿ ಅಕ್ಕಿಯ ಬದಲು ಎಣ್ಣೆ, ಬೆಳೆ ಕಾಳುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಮುಂದಿನ ತಿಂಗಳಿನಿಂದ ಈ ಯೋಜನೆ ಜಾರಿಗೊಳ್ಳಲಿದೆ. ಕಾರ್ಡ್ ದಾರರ ಬೇಡಿಕೆಗೆ ಅನುಗುಣವಾಗಿ ಅಕ್ಕಿಯ ಬದಲು ಪೌಷ್ಟಿಕಾಂಶಯುಕ್ತ ಬೆಳೆ ಕಾಳು ಹಾಗೂ ಎಣ್ಣೆ ವಿತರಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 4ಕೋಟಿ 50 ಲಕ್ಷ ಪಲಾನುಭವಿಗಳಿದ್ದಾರೆ ಎಲ್ಲರಿಗೂ ಈ ಯೋಜನೆ ಅನುಷ್ಠಾನವಾಗಲಿದೆ. ಈಗಾಗಲೇ ಪಲಾನುಭವಿಗಳು ತೆರಿಗೆದಾರಾರಾಗಿದ್ದರೆ ಹಾಗೂ 7ಎಕರೆಗೂ ಹೆಚ್ಚು ಜಮೀನು ಹೊಂದಿದ್ದರೆ ಅಂತವರ ಕಾರ್ಡ್ ಗಳು ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಹಿಸಲಾಗುವುದು, ಈ ಪ್ರಕ್ರಿಯೆ ನಡೆಸಲಾಗುತ್ತದೆ, ಒಂದು ವೇಳೆ ಲೋಪದೋಷ ಕಂಡುಬಂದಲ್ಲಿ ಸ್ಥಳೀಯ ತಹಶೀಲ್ದಾರ್ ರನ್ನು ಭೇಟಿಯಾಗಿ ಸರಿಪಡಿಸಿಕೊಳ್ಳಬಹುದು ಎಂದರು.
ಇದನ್ನು ಓದಿ: ಬಿಪಿಎಲ್ ಕಾರ್ಡ್ | ಅನರ್ಹರ ಪತ್ತೆಗೆ ಹೊಸ ತಂತ್ರಾಂಶ
ಇದೆ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗಾಗಿ ತಂದಿರುವ ಅನ್ನಭಾಗ್ಯ ಯೋಜನೆಯು ಸಮರ್ಪಕವಾಗಿ ಆಹಾರ ಇಲಾಖೆ ಪೂರೈಕೆ ಮಾಡುತ್ತಿದೆ, ಇಲಾಖೆಯ ನಿರ್ಧಾರದಂತೆ ಎಣ್ಣೆ ಕಾಳುಗಳನ್ನು ವಿತರಿಸಲು ಮುಂದಾಗಿರುವುದು ಸ್ವಾಗತಾರ್ಹ, ಪಲಾನುಭವಿಗಳಿಗೆ ತಲುಪಿಸುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ, ಆಹಾರ ವಿತರಣೆಯ ವೇಳೆಯಲ್ಲಿ ಕಾರ್ಡ್ ದಾರಾರಿಂದ ಹಣ ಪಡೆಯುತ್ತಿದ್ದರೆ ಅವುಗಳನ್ನು ಸರಿಪಡಿಸಲಾಗುವುದು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಹಾಗೂ ಹೈ ಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ, ಹಲವಾರು ಹಿರಿಯ ಶಾಸಕರು ಸಚಿವರಾಗಲು ಬಯಸುತ್ತಿರುವುದು ಸಹಜ ಎಂದು ತಿಳಿಸಿದರು.





