Mysore
16
few clouds

Social Media

ಶನಿವಾರ, 24 ಜನವರಿ 2026
Light
Dark

ರಾಜ್ಯದಲ್ಲಿ ಎಷ್ಟು ಆನೆ ಹಾಗೂ ಹುಲಿಗಳಿವೆ ಗೊತ್ತಾ?: ಸಚಿವ ಈಶ್ವರ್‌ ಖಂಡ್ರೆ ಮಾಹಿತಿ

Eshwara Khandre

ಕಲಬುರ್ಗಿ: ರಾಜ್ಯದಲ್ಲಿ 6395 ಆನೆಗಳು ಹಾಗೂ 560 ಹುಲಿಗಳಿವೆ ಎಂದು ಸಚಿವ ಈಶ್ವರ್‌ ಖಂಡ್ರೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಕಲಬುರ್ಗಿಯಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು, ಪ್ರತಿಯೊಬ್ಬರು ಮರವನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು. ಪರಿಸರ ರಕ್ಷಣೆ ಸರ್ಕಾರದ್ದಷ್ಟೇ ಅಲ್ಲ, ನಾಗರಿಕರ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.

ಇದನ್ನು ಓದಿ: ದಸರಾ ಆನೆಗಳ ಸನಿಹಕ್ಕೆ ಹೋಗಿ ಯುವತಿ ರೀಲ್ಸ್‌: ಪ್ರಾಣಿಪ್ರಿಯರ ಆಕ್ರೋಶ

ಊರಿಗೊಂದು ಕೆರೆ- ಮನೆಗೊಂದು ಮರ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ಒಂದು ಮರವನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ 6395 ಆನೆಗಳು ಹಾಗೂ 560 ಹುಲಿಗಳಿವೆ. ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ನೀಡಿದರು.

Tags:
error: Content is protected !!