Mysore
22
broken clouds

Social Media

ಶನಿವಾರ, 10 ಅಕ್ಟೋಬರ್ 2026
Light
Dark

ಮೈಸೂರು | ಹಾಡುಹಗಲೇ ಮತ್ತೊಂದು ಭೀಕರ ಕೊಲೆ , ಪತ್ನಿಯ ಕತ್ತು ಸೀಳಿ ಕೊಂದ ಪತಿ

ಮೈಸೂರು : ನಗರದ ಹೊರವಲಯದ ಇಲವಾಲ ಬಳಿಯ ಜಟ್ಟಿಹುಂಡಿಯಲ್ಲಿ ಪತಿಯೇ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸವಿತಾ(35) ಕೊಲೆಯಾದ ಮಹಿಳೆ.

ಸವಿತಾ ಜಟ್ಟಿಹುಂಡಿ ಸಂತ ಜೋಸೆಫ್‌ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಆಶ್ರಮದ ಗೇಟ್‌ ಬಳಿ ಆಕೆಯ ಗಂಡ ದೇವರಾಜ್‌ ಜಗಳ ಮಾಡಿದ್ದು, ಬಳಿಕ ಸವಿತಾ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು, ಕೊಲೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Tags:
error: Content is protected !!