Mysore
30
light rain

Social Media

ಮಂಗಳವಾರ, 24 ನವೆಂಬರ್ 2026
Light
Dark

ಚೀರನಹಳ್ಳಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ: ಸಾ.ರಾ.ಮಹೇಶ್ ಸಮ್ಮುಖದಲ್ಲಿ 10 ಕುಟುಂಬಗಳು ಜೆಡಿಎಸ್‌ಗೆ ಸೇರ್ಪಡೆ

ಕೆ.ಆರ್.ನಗರ : ಚೀರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಬದಲು ಇಲ್ಲಿನ ಕಾಂಗ್ರೆಸ್ ಮುಖಂಡರ ಮನೆ ಅಭಿವೃದ್ಧಿ ಆಗಿದೆ ಗ್ರಾಮದಲ್ಲಿ ಚರಂಡಿ ಕೂಡ ಮಾಡಿಲ್ಲ ಕಾಂಗ್ರೆಸ್ ಪಕ್ಷದಿಂದ ಬೇಸತ್ತಿದ್ದೇವೆ, ಅಧಿಕಾರ ಇರಲಿ ಇಲ್ಲದಿರಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಜವಾದ ನಾಯಕರು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಎಂದು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಚೀರನಹಳ್ಳಿ ಮಧು ಹೇಳಿದರು.

ಚೀರನಹಳ್ಳಿ ಗ್ರಾಮದಲ್ಲಿ ಹತ್ತು ಕುಟುಂಬಗಳ ಐವತ್ತು ಮಂದಿ ಪೈಕಿ ಮಹಿಳೆಯರು ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಸಚಿವ ಸಾ.ರಾ.ಮಹೇಶ್ ಸಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಳಿಕ ಮಾಜಿ ಸಚಿವ ಸಾ.ರಾ.ಮಹೇಶ್ ಮಾತಮಾಡಿ ನನ್ನನ್ನು ನಂಬಿ‌ ಬಂದವರಿಗೆ ಪ್ರೀತಿ ವಿಶ್ವಾಸದಿಂದ‌ ಕಾಣುತ್ತೇನೆ, ಮುಂಬರುವ 2028 ಕ್ಕೆ ರಾಜ್ಯದಲ್ಲಿ ಕೇಂದ್ರದ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವಂತೆ ಈ‌ಡೀ ರಾಜಗಯದ ಜನರೆ ಬಯಸುತ್ತುದ್ದಾರೆ ಎಂದು ತಿಳಿಸಿದರು

ಈ ವೇಳೆ ಚೀರನಹಳ್ಳಿ ಗ್ರಾಮದ ಕುರುಬ ಸಮುದಾಯದ ಮುಖಂಡರು ಚೀರನಹಳ್ಳಿ ಮದು, ಕಾರ್ತೀಕ್‌, ಬಸವರಾಜು, ಸಿ.ಕೆ.ಸಂಜು , ಸಿ.ಬಿ.ಸುನೀಲ್, ಸಿ.ಕೆ.ದರ್ಶನ್, ಸಿ.ವಿ.ಸುರೇಶ್,‌ ಸಿ.ಬಿ.ಶುಭಾಕರ, ಕಪ್ಲಡಿ ಸ್ವಾಮೀಗೌಡ, ಕುಂದಪ್ಪೇಗೌಡ, ಆನಂದ್, ಸಿ.ಆರ್.ರಾಘು, ಧನುಷ್, ಭೋಜೇಗೌಡ, ಹರೀಶ್, ಸತೀಶ್, ಸ್ವಾಮಿ, ಕಾಂತೇಗೌಡ, ಶ್ರೀನಿವಾಸ್, ರವಿ ಆಚಾರ್, ಗ್ರಾ.ಪಂ.ಮಾಜಿ ಸದಸ್ಯೆ ರೇಣುಕಮ್ಮ, ಜಯಮ್ಮ, ಲತಾ, ಮೀನಾಕ್ಷಮ್ಮ, ಸಿ.ಆರ್.ರಾಘು, ಸಿ.ಎಂ ರಾಜೇಶ್, ಕಲ್ಕಿ ಮಹದೇವ್, ಮಹಿಳೆಯರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರಿದರು.

Tags:
error: Content is protected !!