ಮಂಡ್ಯ : ಬೈಕ್ ವೀಲಿಂಗ್ ಮಾಡಿದ್ದನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪರಿಣಾಮ ಚಾಲಕನ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿರುವ ಘಟನೆ ಜರುಗಿದೆ. ಮಂಡ್ಯ ಸಬ್ದರಿಯಾಬಾದ್ ನಿವಾಸಿ ಬೈಕ್ ಮೆಕ್ಯಾನಿಕ್ ಷರೀಫ್ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಚಾ.ನಗರ : ಬೈಕ್ ವೀಲಿಂಗ್ ಮಾಡಿದ್ದ ಇಬ್ಬರ ಬಂಧನ
ಬೆಂಗಳೂರು ಮೈಸೂರು ಹೆದ್ದಾರಿಯ ಶ್ರೀ ನಿವಾಸಪುರ ಗೇಟ್ ಬಳಿ ತಿಂಗಳ ಹಿಂದೆ ಷರೀಪ್ ಅವರು, ಅತಿವೇಗ, ಅಜಾಗರೂಕತೆಯಿಂದ ಯಮಹಾ ಬೈಕ್ ಚಾಲನೆ ಮಾಡಿ ವಿಲೀಂಗ್ ಮಾಡಿದ್ದಾರೆ. ಅದನ್ನು ವೀಕ್ಷಿಸಿದ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪೇದೆ ಪ್ರಕಾಶ್ ಯರಗಟ್ಟಿ ನೀಡಿದ ದೂರು ದಾಖಲಿಸಿಕೊಂಡು, ಎಫ್ ಐ ಆರ್ ದಾಖಲಾಗಿ ಮುಂದಿನ ಕ್ರಮ ವಹಿಸಿದ್ದಾರೆ.





