ಬೆಂಗಳೂರು : ನಟ ದರ್ಶನ್‌ಗೆ ಜೈಲಿನಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗಿದೆಯೇ ಅಂತ ಪರಿಶೀಲನೆ ನಡೆಸಿ ವರದಿ ನೀಡಲು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಿಗೆ ಹೈ ಕೋರ್ಟ್ ಆದೇಶ ನೀಡಿದೆ.
ನಟ ದರ್ಶನ್ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಜೈಲು ನರಕವಾಗಿದೆ. ಜೈಲ್ ಮ್ಯಾನ್ಯುವಲ್ ಪ್ರಕಾರ ದರ್ಶನ್‌ಗೆ ಕನಿಷ್ಟ ಸೌಲಭ್ಯಗಳನ್ನ ನೀಡಬೇಕೆಂದು ಕೋರ್ಟ್ ಆದೇಶವಿದ್ದರೂ ನೀಡಿಲ್ಲ ಅಂತಾ ದರ್ಶನ್ ಪರ ವಕೀಲ ಸುನೀಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಅದಾದ ಬಳಿಕ ಸಿಆರ್‌ಪಿಸಿ 310 ರಡಿ ಅರ್ಜಿ ಸಲ್ಲಿಸಿ ದರ್ಶನ್‌ಗೆ ಕೊಟ್ಟಿರುವ ಸೌಲಭ್ಯಗಳೇನು ಅಂತ ಜಡ್ಜ್ ಜೈಲಿಗೆ ಬಂದು ಪರಿಶೀಲಿಸಬೇಕೆಂದು ಮನವಿ ಮಾಡಿದ್ದರು. ಇಂದು ಈ ಎರಡೂ ಅರ್ಜಿಗಳ ಸಂಬಂಧ ಸಿಸಿಎಚ್ 64 ರ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ : ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಲಿಗೆ ಭೇಟಿ ನೀಡಿ, ದರ್ಶನ್‌ಗೆ ನೀಡಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ವರದಿ ನೀಡಬೇಕು. ಕೋರ್ಟ್ ಆದೇಶ ಪಾಲನೆ ಆಗಿದ್ಯಾ ಇಲ್ವಾ ಅಂತ ಪರಿಶೀಲನೆ ನಡೆಸಬೇಕು. ಜೈಲಿನ ಮ್ಯಾನ್ಯುವಲ್ ಅಡಿ ದರ್ಶನ್‌ಗೆ ಅಗತ್ಯ ವಸ್ತುಗಳನ್ನ ನೀಡಲಾಗಿದೆಯಾ? ಜೈಲಿನಲ್ಲಿ ದರ್ಶನ್‌ಗೆ ಮಾನಸಿಕ ಮತ್ತು ದೈಹಿಕ ಹಿಂಸೆಯಾಗ್ತಿದ್ಯಾ ಪರಿಶೀಲಿಸಿ ಅ.18ರ ಒಳಗೆ ವರದಿ ನೀಡುವಂತೆ ನ್ಯಾಯಾಧೀಶರು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಿಗೆ ಆದೇಶ ಮಾಡಿದ್ದಾರೆ.





