Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಬಿಸಿಸಿಐಗೆ ನೂತನ ಅಧ್ಯಕ್ಷರ ನೇಮಕ

ಮುಂಬೈ : ದೆಹಲಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಬಿಸಿಸಿಐನ ಸರ್ವಸದಸ್ಯರ ಸಭೆಯಲ್ಲಿ (ಎಜಿಎಂ) ೪೫ ವರ್ಷ ವಯಸ್ಸಿನ ಮಿಥುನ್ ಮನ್ಹಾಸ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮಿಥುನ್ ಅವರು ೧೯೯೭-೯೮ರಿಂದ ೨೦೧೬-೧೭ರವರೆಗೆ ೧೫೭ ಪ್ರಥಮ ದರ್ಜೆ, ೧೩೦ ಲಿಸ್ಟ್ ಎ ಮತ್ತು ೫೫ ಐಪಿಎಲ್ ಪಂದ್ಯಗಳಲ್ಲಿ ಆಡಿದ್ದರು.

ಇದನ್ನೂ ಓದಿ:-ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಜತೆಗೆ ಸಾಹಸ ಹಾಗೂ ಜಲ ಕ್ರೀಡೆ : ಡಾ.ರಾಮಪ್ರಸಾತ್ ಮನೋಹರ್

ಮಿಥುನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ೨೭ ಶತಕ ಸಹಿತ ೯,೭೧೪ ರನ್ ಗಳಿಸಿದ್ದರು. ಜತೆಗೆ, ಲಿಸ್ಟ್ ಎ ಪಂದ್ಯಗಳಲ್ಲಿ ೪,೧೨೬ ರನ್ ಸಿಡಿಸಿದ್ದರು. ಈ ಮುಂಚೆ ಬಿಸಿಸಿಐ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರ ಅಧಿಕಾರಾವಧಿ ಆಗಸ್ಟ್‌ನಲ್ಲಿ ಮುಕ್ತಾಯವಾಗಿತ್ತು.

Tags:
error: Content is protected !!