Mysore
19
few clouds

Social Media

ಬುಧವಾರ, 21 ಜನವರಿ 2026
Light
Dark

ಓದುಗರ ಪತ್ರ: ಕಾಲೇಜು ಬಳಿ ಸ್ವಚ್ಛತೆ ಕಾಪಾಡಿ

ಓದುಗರ ಪತ್ರ

ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಮತ್ತು ಉದ್ಯಾನವನದ ಸನಿಹದಲ್ಲಿರುವ ರಸ್ತೆಯಲ್ಲಿ ಅಕ್ಕ ಪಕ್ಕದಲ್ಲಿರುವ ಮನೆಯವರು ಮೈಸೂರು ನಗರದ ಪಾಲಿಕೆಯ ಕಸದ ವಾಹನಕ್ಕೆ ಕಸ ಕೊಡದೆ, ರಾತ್ರಿ ವೇಳೆ ಕಾಲೇಜಿನ ಮುಂಭಾಗದಲ್ಲಿ ಸುರಿದು ಹೋಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ಜ್ಯೋತಿ ಶಿಕ್ಷಣ ಸಂಸ್ಥೆಯೂ ಇರುವುದರಿಂದ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಅಧ್ಯಾಪಕರು, ಉಪನ್ಯಾಸಕರು ಕಸದ ದುರ್ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ. ಬೆಳಗಿನ ಹಾಗೂ ಸಂಜೆ ವೇಳೆ ವಾಯುವಿಹಾರ ಮಾಡುವವರಿಗೂ ಕಸದ ದುರ್ವಾಸನೆಯಿಂದಾಗಿ ಕಿರಿಕಿರಿಯಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕಸ ಸಂಗ್ರಹಿಸುವ ಪಾಲಿಕೆಯ ವಾಹನಕ್ಕೆ ಕಸವನ್ನು ನೀಡುವಂತೆ ಸಾರ್ವಜನಿಕರಿಗೆ ಸೂಚನೆ ನೀಡಬೇಕು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!