Mysore
29
haze

Social Media

ಸೋಮವಾರ, 30 ಮಾರ್ಚ್ 2026
Light
Dark

ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ರೈತ ದಸರಾದಲ್ಲಿಂದು ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಎರಡನೇ ದಿನದ ರೈತ ದಸರಾದಲ್ಲಿಂದು ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ಮೈಸೂರು ನಗರದ ಜೆ.ಕೆ.ಗ್ರೌಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಧಿಕ ಹಾಲು ಕರೆದ ಹಸುವಿಗೆ 1 ಲಕ್ಷ ಬಹುಮಾನ ಸಿಗಲಿದೆ. ಎರಡನೇ ಬಹುಮಾನ 80 ಸಾವಿರ ಸಿಗಲಿದ್ದು, ಮೂರನೇ ಬಹುಮಾನ 60 ಸಾವಿರ ರೂ ಸಿಗಲಿದೆ. ನಾಲ್ಕನೇ ಬಹುಮಾನವಾಗಿ 40 ಸಾವಿರ ನಿಗದಿಯಾಗಿದೆ.

ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಬಂದಿದ್ದ 15 ಎಚ್ಎಫ್ ರಾಸುಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ವಿಶೇಷವೆನಿಸಿತು.

ಇದನ್ನು ಓದಿ : ದಸರಾ: ಪ್ರವಾಸಿಗರಿಗೆ ಆರೋಗ್ಯ ಜಾಗೃತಿ, ತಪಾಸಣೆ

ಬೆಳಗ್ಗೆ 6.30ಕ್ಕೆ ಆರಂಭವಾದ ಹಾಲು ಕರೆಯುವ ಸ್ಪರ್ಧೆಯಲ್ಲಿ 20 ನಿಮಿಷಗಳ ಕಾಲಾವಕಾಶವನ್ನು ನಿಗದಿ ಮಾಡಲಾಗಿತ್ತು.

ಬೆಂಗಳೂರು ಆನೇಕಲ್‌ನ ಅಜಯ್ ಬಿನ್ ಪಾಪರೆಡ್ಡಿ ಅವರು, 21.5 ಕೆ.ಜಿ ಹಾಲು ಕರೆಯುವ ಮೂಲಕ ಮೊದಲ ಸ್ಥಾನ ಪಡೆದರೆ, ಪಿರಿಯಾಪಟ್ಟಣ ಚಿಟ್ಟೇನಹಳ್ಳಿ ಸಂಜೀವ್ ಶಿವೇಗೌಡ ಅವರು, 20 ಕೆ.ಜಿ 150 ಗ್ರಾಂ ಹಾಲು ಕರೆದು ಎರಡನೇ ಸ್ಥಾನ ಪಡೆದುಕೊಂಡರು.

ಮೈಸೂರಿನ ಬಂಡೀಪಾಳ್ಯದ ಚೇತನ್ ಶರ್ಮಾ ಬಂಡಿಪಾಳ್ಯ ಅವರು 19.4 ಕೆಜಿ ಮೂರನೇ ಸ್ಥಾನ ಪಡೆದು ಖುಷಿಪಟ್ಟರು.

ಸಂಜೆ ಮತ್ತೊಂದು ಸುತ್ತು ಹಾಲು ಕರೆದ ಬಳಿಕ ಪ್ರಶಸ್ತಿ ಘೋಷಣೆ ನಡೆಯಲಿದ್ದು, ಸಂಜೆಯೇ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

Tags:
error: Content is protected !!