Mysore
29
scattered clouds

Social Media

ಶನಿವಾರ, 24 ಜನವರಿ 2026
Light
Dark

ಮೈಸೂರು ದಸರಾದಲ್ಲಿ ಎಲ್ಲರೂ ಭಾಗವಹಿಸಿ: ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು: ಇದೇ ಸೆಪ್ಟೆಂಬರ್.22ರಂದು ವಿದ್ಯುಕ್ತವಾಗಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಆಗಲಿದ್ದು, ಅದೇ ದಿನ ಫಲಪುಷ್ಪ ಪ್ರದರ್ಶನ, ಕುಸ್ತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್.‌10ರಂದು ಉದ್ಘಾಟನೆಯಾಗಿರುವ ಯುವ ಸಂಭ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಯುವ ಸಂಭ್ರಮದಲ್ಲಿ 480 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಮಳೆ ಬಂದರು 10 ರಿಂದ 15 ಸಾವಿರ ಯುವಕರು ಭಾಗವಹಿಸಿ ಯಶಸ್ವಿ ಮಾಡುತ್ತಿದ್ದಾರೆ. ನಿನ್ನೆ ಚಲನಚಿತ್ರೋತ್ಸವ ಉದ್ಘಾಟನೆಯಾಗಿದೆ. ಅಲ್ಲಿ ಹಳೆಯ ಚಿತ್ರಗಳ ಪ್ರದರ್ಶನವಾಗುತ್ತಿದೆ.

ಇದನ್ನು ಓದಿ: ಮೈಸೂರು ದಸರಾ | ಸಮಾಜಮುಖಿ ಕೆಲಸ ಮಾಡುತ್ತಿರುವ ಸಿನಿಮಾ : ಸಚಿವ ಮಹದೇವಪ್ಪ

ಸೆ.22ರಂದು ವಿದ್ಯುಕ್ತವಾಗಿ ದಸರಾ ಉದ್ಘಾಟನೆ ಆಗಲಿದ್ದು, ಅದೇ ದಿನ ಫಲಪುಷ್ಪ ಪ್ರದರ್ಶನ, ಕುಸ್ತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಇನ್ನು ಸೆಪ್ಟೆಂಬರ್.23ರಿಂದ 27ರವರೆಗೆ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಉತ್ತನಹಳ್ಳಿ ಬಳಿ ದೊಡ್ಡ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಕಳೆದ ಬಾರಿಯಂತೆ ಉತ್ತಮ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಅರ್ಜುನ್ ಜನ್ಯ ಮೊದಲ ದಿನ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್.27ರಂದು ಏರ್ ಶೋ ಮಾಡುತ್ತಿದ್ದೇವೆ.

ಅಕ್ಟೋಬರ್.1ಕ್ಕೆ ಏರ್ ಶೋ ಇದೆ. ಸೆ.28, 29, ಅಕ್ಟೋಬರ್.1 ಹಾಗೂ 2ರಂದು ಒಟ್ಟು ನಾಲ್ಕು ದಿನ ಈ ಬಾರಿ 3 ಸಾವಿರ ಡ್ರೋನ್‌ಗಳ ಶೋ ಮಾಡುತ್ತೇವೆ. ಹಾಗಾಗಿ ದಸರಾದಲ್ಲಿ ಎಲ್ಲರೂ ಭಾಗವಹಿಸಿ. ನಮ್ಮೂರು ಮೈಸೂರು ಇದಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಅತಿಥಿಗಳನ್ನು ಗೌರವಿಸುವ ಸನ್ನಡತೆ ಇದೆ. ಮೈಸೂರು ಎಂದರೆ ಜನರ ಒಗ್ಗೂಡುವಿಕೆ. ಮಹಾರಾಣಿ ಕಾಲೇಜು ಕಟ್ಟಿದ್ದು ಎಲ್ಲಾ ಜನರಿಗಾಗಿ ಕೇವಲ ಯಾರೋ ಒಬ್ಬರಿಗೆ ಮಾತ್ರವಲ್ಲ. ದಸರಾ ವೇಳೆ ಯಾವುದೇ ತಂಟೆ ತಕರಾರು ಇರೋದಿಲ್ಲ. ಇಂದು ಇರೋಲ್ಲ ನಾಳೆಯೂ ಇರೋದಿಲ್ಲ ಎಂದು ಹೇಳಿದರು.

Tags:
error: Content is protected !!