Mysore
16
clear sky

Social Media

ಗುರುವಾರ, 29 ಜನವರಿ 2026
Light
Dark

ಸತ್ಯ ಹೇಳಿದ್ರೆ FIR ಹಾಕ್ತಾರೆ ಅಂತಾ ಸತ್ಯ ಹೇಳೋದು ನಿಲ್ಸೋಕ್ ಆಗುತ್ತಾ?: ಎಂಎಲ್‌ಸಿ ಸಿ.ಟಿ.ರವಿ

ct ravi

ಮದ್ದೂರು: ಮತೀಯ ಗ್ರಂಥಗಳ ನಡುವಿನ ವ್ಯತ್ಯಾಸದ ಬಗ್ಗೆ SIT ಅಧ್ಯಯನ ನಡೆಯಲಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಈ ಕುರಿತು ಮದ್ದೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತ್ಯ ಹೇಳಿದ್ರೆ FIR ಹಾಕ್ತಾರೆ ಅನ್ನೋದಾದ್ರೆ ಸತ್ಯ ಹೇಳೋದು ನಿಲ್ಸೋಕ್ ಆಗುತ್ತಾ?

ಇದನ್ನು ಓದಿ : ರಾಜ್ಯದಲ್ಲಿ 1 ಲಕ್ಷ ಕೋಟಿ ಮೊತ್ತದ ಗಣಿ ಹಗರಣ ನಡೆದಿದೆ: ಸಿಎಂಗೆ ಪತ್ರ ಬರೆದ ಕೈ ಮುಖಂಡರು

ಗಣಪತಿ ಮೇಲೆ ಕಲ್ಲು ಹೊಡೆದ್ರೆ ಸಹಿಸಿಕೊಳ್ಳಬೇಕಾ? ಅವರ ಮೇಲೆ ಕಲ್ಲು ಹೊಡೆದ್ರೆ ಅವರು ಸಹಿಸಿಕೊಳ್ತಾರಾ? ಅವರು ಸಹಿಸಿಕೊಳ್ಳೊದಾದ್ರೆ ಸಹನೆ ಪಾಠ ಮಾಡಲಿ. ಆಕ್ಷನ್ಗೆ ರಿಯಾಕ್ಷನ್ ಇರುತ್ತೆ ಅಷ್ಟೆ. FIR ಬಗ್ಗೆ ನಮ್ಮ ವಕೀಲರು ತಲೆಕೆಡಿಸಿಕೊಳ್ತಾರೆ. ಮುಸ್ಲಿಮರ ದುರ್ಬೋದನೆಯನ್ನು ನಿಲ್ಲಿಸದಿದ್ರೆ ಶಾಂತಿ ಹೇಗೆ ನೆಲಸುತ್ತೆ? ಮುಸ್ಲಿಮರ ಮತಿಯ ಗ್ರಂಥಗಳು ಕಲ್ಲು ಹೊಡೆಯುವಂತೆ ಬೋಧನೆ ಮಾಡುತ್ತವೆ. ಮತೀಯ ಗ್ರಂಥಗಳಲ್ಲಿ ಸಹ ಬಾಳ್ವೆಗೆ ಜಾಗ ಇಲ್ಲಾ. ಮತೀಯ ಗ್ರಂಥದ ಬಗ್ಗೆ SIT ಅಧ್ಯಯನ ನಡೆಸಲಿ. ಹಿಂದುಗಳ ಗ್ರಂಥವನ್ನು ಕೂಡ ಅಧ್ಯಯನ ಮಾಡಲಿ. ನಮ್ಮ ಗ್ರಂಥ ಅಧ್ಯಯನ ಮಾಡಿದ್ರೆ ದೇವರಾಗ್ತಾರೆ. ಅವರ ಗ್ರಂಥ ಅಧ್ಯಯನ ಮಾಡಿದ್ರೆ ಬಿನ್‌ಲಾಡನ್ ಆಗ್ತಾರೆ. ಈ ನೆಲದ ಮದ್ದೂರಮ್ಮ, ಗಣೇಶ, ಶಿವನಿಗೆ ಜಾಗ ಇಲ್ಲಾ ಅವರ ಬಳಿ ಅಲ್ಲಾ ಒಬ್ಬನಿಗೆ ಜಾಗ. ಉಳಿದೆಲ್ಲಾ ದೇವರುಗಳನ್ನು ದ್ವೇಷಿಸುವುದೇ ಸಮಸ್ಯೆ. ಅವರು ನಾಲ್ಕಿದ್ದಾಗ ಬೇರೆ, ನಲವತ್ತಿದ್ದಾಗ ಬೇರೆ, ನಾನೂರಾದಾಗ ಕತಲ್ ಕರೋ ಅಂತ ಡೈರೆಕ್ಷನ್ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಮದ್ದೂರಿನಲ್ಲಿ ಪ್ರಗತಿಪರರ ಪ್ರತಿಭಟನಾ ರ್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮನೆ ಹಾಳು ಮಾಡೋದು, ದ್ವೇಷಿಸೋರ ಪರ ಕೆಲಸ ಮಾಡೋದು ಪ್ರಗತಿಪರರ ಕೆಲಸ ಆಗಲ್ಲ. ಪ್ರಗತಿಪರರ ಜೊತೆ ಚೆರ್ಚೆಗೆ ನಾನು ಸಿದ್ಧನಿದ್ದೇನೆ ಬೇಕಿದ್ದರೆ ಬರಲಿ ಎಂದು ಆಹ್ವಾನಿಸಿದರು.

Tags:
error: Content is protected !!