Mysore
34
broken clouds

Social Media

ಗುರುವಾರ, 30 ಏಪ್ರಿಲ 2026
Light
Dark

ನೀಲಗಿರಿ ತೋಪಿನಲ್ಲಿದ್ದ ಹೆಬ್ಬಾವು ರಕ್ಷಣೆ

ಹಲಗೂರು : ಇಲ್ಲಿಗೆ ಸಮೀಪದ ಡಿ.ಹಲಸಹಳ್ಳಿ ಗ್ರಾಮದಲ್ಲಿ ನಾಗರಾಜು ಅಲಿಯಾಸ್ ರಾಮಾಚಾರಿ ಎಂಬವರು ತಮ್ಮ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ನೀಲಗಿರಿ ತೋಪಿನಲ್ಲಿ ಹೆಬ್ಬಾವು ಕಂಡು ಬಂದಿತು.

ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಉರಗ ತಜ್ಞ ಜಗದೀಶ್ ಸ್ಥಳಕ್ಕೆ ಬಂದು ಹೆಬ್ಬಾವನ್ನು ಸೆರೆ ಹಿಡಿದು ಶಿಂಷಾ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

Tags:
error: Content is protected !!