Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

‘ಸ್ಟ್ಯಾಂಡರ್ಡ್-ಪೂರ್’ ಭಾರತವನ್ನು ಬಿಬಿಬಿ ಮಟಕ್ಕೇರಿಸಿದೆ

standard pure

ಪ್ರೊ.ಆರ್.ಎಂ.ಚಿಂತಾಮಣಿ

ಜಾಗತಿಕ ಮಟ್ಟದಲ್ಲಿ ಮೌಲ್ಯಮಾಪನ ಮತ್ತು ಮೌಲ್ಯ ನಿರ್ಧಾರ (Evaluation and Rating)  ಕಾರ್ಯಗಳಲ್ಲಿ ತೊಡಗಿರುವ ಹಲವು ಸಂಸ್ಥೆಗಳಿವೆ. ಇವುಗಳು ತಮ್ಮವೇ ಆದ ಆರ್ಥಿಕ, ಸಾಮಾಜಿಕ, ನೀತಿ ನಿರೂಪಣೆ, ರಾಜಕೀಯ ವ್ಯವಸ್ಥೆ, ಅಭಿವೃದ್ಧಿ ಮತ್ತು ಮುನ್ನೋಟ ಹೀಗೆ ೧೦೦ಕ್ಕೂ ಹೆಚ್ಚು ಮಾನದಂಡ ಗಳನ್ನು ಇಟ್ಟುಕೊಂಡು ಸಾರ್ವಭೌಮ ದೇಶಗಳೂ ಸೇರಿದಂತೆ ಕಂಪೆನಿಗಳು ಮತ್ತು ಸಂಘಟನೆಗಳನ್ನು ಮೌಲ್ಯಮಾಪನ ಮಾಡಿ ಗುಣಮಟ್ಟದ ಗ್ರೇಡುಗಳನ್ನು ಪ್ರಮಾಣ ಪತ್ರಗಳ ರೂಪದಲ್ಲಿ ಕೊಡುತ್ತವೆ. ಇಂಥ ಪ್ರಮಾಣೀಕರಣ ಸಂಸ್ಥೆಗಳಲ್ಲಿ ‘ಸ್ಟ್ಯಾಂಡರ್ಡ್-ಪೂರ್’ ಪ್ರಮುಖವಾದದ್ದು. ಇದರ ಅಭಿಪ್ರಾಯಗಳು ಆಳವಾದ ಅಧ್ಯಯನ ಮತ್ತು ಸಂಶೋಧನೆಗಳಿಂದ ರೂಪುಗೊಂಡಿದ್ದು, ಇವುಗಳಿಗೆ ಸರ್ಕಾರಗಳು, ವಿವಿಧ ವಿಷಯಗಳ ತಜ್ಞರು, ಹೂಡಿಕೆದಾರರು, ಉದ್ಯಮಿಗಳು, ಕಾರ್ಮಿಕ ನಾಯಕರು ಹೀಗೆ ಆಸಕ್ತ ವಲಯಗಳಲ್ಲಿ ಮನ್ನಣೆ ಮತ್ತು ಗೌರವವಿದೆ.

ಇಂಥ ಸ್ಟ್ಯಾಂಡರ್ಡ್-ಪೂರ್(ಎಸ್ – ಪಿ) ಕಳೆದ ವಾರದ ಅಂತ್ಯದಲ್ಲಿ (ಆಗಸ್ಟ್ ೧೪) ತಾನೇ ಈ ಹಿಂದೆ ೨೦೦೭ರಲ್ಲಿ BBB ಗ್ರೇಡಿಗೆ ಇಳಿಸಿದ್ದ ಭಾರತದ ಗುಣಮಟ್ಟದ ಗ್ರೇಡನ್ನು BBBಗೆ ಹೆಚ್ಚಿಸಿದೆ. ಇದರ ಅರ್ಥ ಎಲ್ಲ ದೃಷ್ಟಿಕೋನಗಳಿಂದಲೂ ವಿಶೇಷವಾಗಿ ಹೂಡಿಕೆ ಮಾಡುವ ದೃಷ್ಟಿಯಿಂದ ‘ಒಂದು ಮಟ್ಟದಲ್ಲಿ ಸ್ಥಿರವಾಗಿದೆ’ ಅಂದರೆ ಸುರಕ್ಷಿತವಾಗಿದೆ. ಭಾರತಕ್ಕೆ ಇದು ಸಕಾರಾತ್ಮಕ ಬದಲಾವಣೆ ಇತರ ಸಂಸ್ಥೆಗಳಾದ ಮೂಡಿಸ್  ಮತ್ತು ಫಿಟ್ಜ್ ಸಹಿತ ಇದೇ ಅರ್ಥ ಬರುವಂತೆ ಸ್ಥಿರ  ಎಂದು ಪ್ರಮಾಣೀಕರಿಸಿ ತಮ್ಮವೇ ಆದ ಗ್ರೇಡ್‌ಗಳನ್ನು ಕೊಟ್ಟಿರುತ್ತವೆ. ಇದು ನಮಗೆ ಅನುಕೂಲಕರವಾಗಿದೆ.

ಎಸ್ & ಪಿಯು ಎಲ್ಲ ಮಾನದಂಡಗಳನ್ನೂ ಒಟ್ಟುಗೂಡಿಸಿ ಎಲ್ಲ ದೃಷ್ಟಿಕೋನಗಳಿಂದಲೂ ಶ್ರೇಷ್ಠ (ಅತ್ಯುತ್ತಮ ) ಮಟ್ಟಕ್ಕೆ ಅಅಅ ಗ್ರೇಡನ್ನೂ ಕನಿಷ್ಠ ಗುಣಮಟ್ಟಕ್ಕೆ (ಅತ್ಯಂತ ಕೆಳಮಟ್ಟಕ್ಕೆ ) CCC ಗ್ರೇಡ್ ಎಂದೂ ನಿರ್ಧರಿಸುತ್ತದೆ. ಇವೆರಡರ ನಡುವೆ ವಿವಿಧ ಗುಣಮಟ್ಟಗಳಿಗಾಗಿ ಎ, ಬಿ ಮತ್ತು ಸಿ ಅಕ್ಷರಗಳೊಂದಿಗೆ + ಮತ್ತು  ಚಿಹ್ನೆಗಳನ್ನು ಬಳಸಿ ಗ್ರೇಡುಗಳನ್ನು ನಿರ್ಧರಿಸುತ್ತದೆ.

ಹೂಡಿಕೆಗಳ ಮಾನದಂಡದ ವಿಷಯದಲ್ಲಿ ಒಂದು ಮಾತನ್ನು ಉದಾಹರಿಸುವುದಾದರೆ ಬಿಬಿಬಿ ಗ್ರೇಡಿನಂತೆ ಕನಿಷ್ಠ , ಅಸ್ಥಿರ ಮತ್ತು ಅಷ್ಟೇನೂ ಲಾಭದಾಯಕವಲ್ಲ ಎಂದು ಅರ್ಥೈಸ ಬಹುದು. ಅದರ ಮೇಲೆ ಹೋದಂತೆ ಬಿಬಿಬಿಯಿಂದ ಮೇಲೆ ಬಿಬಿಬಿ – A, A+,AA-, AA+ AA- ಮತ್ತು ಅಂತಿಮವಾಗಿ AAA ವರೆಗೆ ಗುಣಮಟ್ಟ ಅಂದರೆ ಸುಸ್ಥಿರತೆ ಮೌಲ್ಯ ಬೆಳವಣಿಗೆ ಮತ್ತು ಲಾಭದಯಕತೆ ಹೆಚ್ಚುತ್ತ ಹೋಗಿ ಅಲ್ಲಿಗೆ ಶ್ರೇಷ್ಠತೆ ತಲುಪಿದೆ ಎಂದರ್ಥ. ಇದನ್ನೇ ಎಲ್ಲ ಮಾನದಂಡ ಗಳಿಗೂ ಹೇಳಬಹುದು.

ಎಸ್ & ಪಿಯ ಭಾರತದ ಬಗ್ಗೆ ಮುನ್ನೋಟ

ಇತರ ಎಲ್ಲ ದೇಶಗಳಂತೆ ಭಾರತದ ಅರ್ಥ ವ್ಯವಸ್ಥೆಯ ಬಗ್ಗೆಯೂ ಎಲ್ಲ ಅಧಿಕೃತ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸುವ ಎಸ್ – ಪಿ, ಮುಂದಿನ ನಾಲ್ಕು ವರ್ಷಗಳ ಮುನ್ನೋಟಗಳನ್ನು ಪ್ರಕಟಿಸಿದೆ. ರಾಷ್ಟ್ರೀಯ ಒಟ್ಟಾದಾಯದ (Gross Domestic Product -ಜಿ.ಡಿ.ಪಿ.) ವಾರ್ಷಿಕ ಬೆಳವಣಿಗೆಯ ಗತಿಯೊಡನೆ ವಾರ್ಷಿಕ ಬೆಲೆಯೇರಿಕೆ (ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ) ನಿರುದ್ಯೋಗ ಪ್ರಮಾಣ ಪತ್ರಗಳನ್ನೂ ಮುನ್ನೋಟದಲ್ಲಿ ಕೊಡಲಾಗಿದೆ. ಅಲ್ಲದೇ ಜಿ.ಡಿ.ಪಿ.ಯೊಡನೆ ವಾರ್ಷಿಕ ನಿವ್ವಳ ವಿದೇಶಿ ನೇರ ಹೂಡಿಕೆಗಳು (ಎಫ್.ಡಿ.ಐ.) ಉಳಿತಾಯಗಳು, ವಿದೇಶಿ ವ್ಯಾಪಾರ ಶೇಷ ನಿರ್ಯಾತಗಳು ಮತ್ತು ದೇಶದ ಸಾಲಗಳ ಪ್ರಮಾಣಗಳನ್ನು ಕೊಡಲಾಗಿದೆ. ನೈಜ ವಾರ್ಷಿಕ  ಹೂಡಿಕೆಗಳೂ ಇಲ್ಲಿವೆ.

ಇಲ್ಲಿ ದಾಖಲಿಸಲಾಗಿರುವ ಇನ್ನೊಂದು ಮಹತ್ವದ ವಿಷಯವೆಂದರೆ ೧೯೯೧ರಿಂದ ಇಲ್ಲಿಯವರೆಗೆ ಜಾರಿಗೆ ತಂದ ಸುಧಾರಣೆಗಳ ಪ್ರಸ್ತಾಪ . ಇವೆಲ್ಲ ಈ ಫಲ ಕೊಡಲು ಆರಂಭಿಸಿದ್ದರಿಂದ ಜಿ.ಡಿ.ಪಿ. ಏರು ಮುಖವಾಗಲು ಕಾರಣವಾಗಿದೆ. ಗ್ರೇಡ್ ಮೇಲ್ಮಟ್ಟಕ್ಕೇರಿಸಲು ಇದೂ ಒಂದು ಬಲವಾದ ಕಾರಣ ಎನ್ನಲಾಗಿದೆ. ಈ ಅಂಶವನ್ನು ಎಸ್ ಪಿ ಪಿ ಯಲ್ಲಿ ಜಪಾನ್ ಹೊರತು ಪಡಿಸಿ ಏಶಿಯಾದ ಎಲ್ಲ ದೇಶಗಳ (ಭಾರತವೂ ಸೇರಿದಂತೆ ) ಅಧ್ಯಯನದ ನಿರ್ದೇಶಕರಾಗಿರುವ ಯೀ ಫ್ರಾನ್ಸ್ ಫುವಾ ರವರೇ ಹೇಳಿದ್ದಾರೆ.

ಭಾರತದ ಸರ್ಕಾರದ ಮೇಲೆ ಎರಡು ಜವಾಬ್ದಾರಿಗಳಿವೆ. ಒಂದು ಸರ್ಕಾರದ ಹಣಕಾಸು (ಬಜೆಟ್‌ನಲ್ಲಿ ಮತ್ತು ಅದನ್ನು ಅನುಷ್ಠಾನಗೊಳಿಸುವಾಗ ) ಕೊರತೆಗಳನ್ನು ಕಡಿಮೆ ಮಾಡುವುದು. ಇದನ್ನು ಸಾಧಿಸಬೇಕಾದರೆ ಸರ್ಕಾರದ ವೆಚ್ಚಗಳ ಗುಣಮಟ್ಟವನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಇದರ ಸಕಾರಾತ್ಮಕ ಪರಿಣಾಮ ಮುಂದಿನ ವರ್ಷಗಳ ಹಣಕಾಸಿನ ಮೇಲೆ ಆಗೇ ಆಗುತ್ತದೆ.

ಇಲ್ಲಿರುವ ಸಂಖ್ಯಾಪಟ್ಟಿಯಲ್ಲಿ ಮುನ್ನೋಟದ ವಿವರಗಳಿವೆ ಒಂದು ಮಾತು: ಇಷ್ಟಲ್ಲ ಚರ್ಚೆಯ ನಂತರವೂ ಆರ್ಥಿಕ ಬೆಳವಣಿಗೆ ರಾಜಕೀಯ ನಿರ್ಧಾರಗಳನ್ನು ಅವಲಂಬಿಸಿದೆ. ಎಷ್ಟೆಂದರೂ ಇದು ರಾಜಕೀಯ ಅರ್ಥ ವ್ಯವಸ್ಥೆ (Political Economy) ರಾಜಕೀಯ ಪ್ರಭಾವ ಆರ್ಥಿಕ ನೀತಿಗಳ ಮೇಲೆ ಇದ್ದೇ ಅಂತಿಮವಾಗಿ ಮಾನವ ಕಲ್ಯಾಣಕ್ಕಾಗಿ ಆರ್ಥಿಕ ಪ್ರಗತಿ ಬೇಕೇ ಬೇಕು.

Tags:
error: Content is protected !!