Mysore
15
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮಡಿಕೇರಿ | ಬಿರುಕು ಬಿಟ್ಟಿರುವ ತಡೆಗೋಡೆ ವೀಕ್ಷಿಸಿದ ಶಾಸಕ ಮಂಥರ್‌ಗೌಡ

Madikeri | MLA Manthar Gowda inspects a cracked retaining wall.

ಮಡಿಕೇರಿ : ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು ಬಿಟ್ಟಿರುವ ತಡೆಗೋಡೆಯನ್ನು ಶಾಸಕ ಡಾ.ಮಂಥರ್‌ಗೌಡ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.

ಬಿರುಕು ಬಿಟ್ಟಿರುವ ತಡೆಗೋಡೆ ಕುಸಿದು ಬಿದ್ದರೆ ಹೆದ್ದಾರಿ ಬಂದ್ ಆಗಲಿದೆ. ಆದ್ದರಿಂದ ತಜ್ಞ ಇಂಜಿನಿಯರ್‌ಗಳನ್ನು ಆಹ್ವಾನಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕೆಂದು ಹೆದ್ದಾರಿ ವಿಭಾಗದ ಇಂಜಿನಿಯರ್‌ಗೆ ಸೂಚಿಸಿದರು. ನವೆಂಬರ್‌ವರೆಗೂ ಮಳೆ ಇರುವ ಸಾಧ್ಯತೆ ಇದೆ. ಆದ್ದರಿಂದ ಹೆದ್ದಾರಿ ಸುರಕ್ಷತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2021-22 ರಲ್ಲಿ ತಡೆಗೋಡೆ ನಿರ್ಮಿಸಿದೆ. ತಡೆಗೋಡೆ ಸಮೀಪದಲ್ಲಿ 5 ಕುಟುಂಬಗಳಿದ್ದು, ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ಹೆದ್ದಾರಿ ಸುರಕ್ಷತೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಶಾಸಕರು ಸುದ್ದಿಗಾರರಿಗೆ ತಿಳಿಸಿದರು.

ತಹಶಿಲ್ದಾರ್ ಶ್ರೀಧರ್, ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಎಇಇ ಸತೀಶ್, ಪೌರಾಯುಕ್ತ ರಮೇಶ್, ಜಿ.ಪಂ.ಇಂಜಿನಿಯರ್‌ಗಳು, ಸ್ಥಳೀಯರು ಹಾಜರಿದ್ದರು.

Tags:
error: Content is protected !!