Mysore
34
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಕಾರ್ಮಿಕರಿಗೆ 9-10ಗಂಟೆ ಕೆಲಸ | ಕೇಂದ್ರ ಪ್ರಸ್ತಾವನಗೆ ಒಪ್ಪಿಗೆ ನೀಡಲ್ಲ : ಲಾಡ್‌

9-10 Hour Workday for Labourers | Will Not Accept Centre’s Proposal

ಬೆಂಗಳೂರು: ಕಾರ್ಮಿಕರು 9 ರಿಂದ 10 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾರ್ಮಿಕರು ಒಪ್ಪಿದರೆ ಮಾತ್ರ ಅವಕಾಶ ಕೊಡುತ್ತೇವೆ. ಅವರು ಒಪ್ಪದಿದ್ದರೆ ಅವಕಾಶ ಕೊಡುವುದಿಲ್ಲ. ಕಾರ್ಮಿಕರ ಅಭಿಪ್ರಾಯ ವನ್ನು ಪಡೆಯುತ್ತೇವೆ ಎಂದರು.

ಕೇಂದ್ರ ಸರ್ಕಾರದ ಪ್ರಸ್ತಾವನೆ ಕುರಿತಂತೆ ಟ್ರೇಡ್ ಯೂನಿ ಯನ್‌ ಹಾಗೂ ಕೈಗಾರಿಕೆಗಳ ಜೊತೆ ಸಭೆ ನಡೆಸಲಾಗಿದೆ. 48 ಕೆಲಸ ಮಾಡಬೇಕು ಎಂದರು.

ವಾರಕ್ಕೆ ಎರಡು ದಿನ ರಜಾ ಇರಲಿದೆ ಎಂಬ ವಿಚಾರದ ಬಗ್ಗೆ ಕಾರ್ಮಿಕರು ಒಪ್ಪಿದರೆ ಮಾತ್ರ ಜಾರಿ ಮಾಡಬಹುದು. ಮಾರ್ಗಸೂಚಿ ಪ್ರಕಾರ ನಾವು ಅವಕಾಶವನ್ನು ಕಲ್ಪಿಸುತ್ತೇವೆ. ಟಿಸಿಎಸ್ ನಿಂದ 12 ಸಾವಿರ ಉದ್ಯೋಗವನ್ನು ಕಡಿತ ಮಾಡುವ ಬಗ್ಗೆ ಆ ಕಂಪೆನಿಯ ಜೊತೆ ಮಾತನಾಡುತ್ತೇವೆ ಎಂದರು.

Tags:
error: Content is protected !!