ತಿ.ನರಸೀಪುರ : ಪುರಸಭಾ ತೆರಿಗೆ ವಂಚನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭಾ ಸದಸ್ಯ ಟಿ.ಎಂ.ನಂಜುಂಡಸ್ವಾಮಿಯನ್ನು ಪಟ್ಟಣ ಪೋಲೀಸರು ಬಂಧಿಸಿದ್ದಾರೆ.
ಪುರಸಭೆಗೆ ಕೆಲ ಖಾತೆದಾರರು ತೆರಿಗೆ ಪಾವತಿಸಿರುವುದಾಗಿ ಕಚೇರಿಗೆ ನೀಡಿರುವ ಚಲನ್ ಗಳಲ್ಲಿ ಬ್ಯಾಂಕಿನ ಸೀಲನ್ನು ನಕಲಿ ಮಾಡಿ ಪುರಸಭೆಗೆ ವಂಚಿಸಲಾಗಿದೆ. ಸದಸ್ಯ ನಂಜುಂಡಸ್ವಾಮಿ ಜತೆಗೂಡಿ ತೆರಿಗೆದಾರರು ತೆರಿಗೆ ವಂಚಿಸಿದ್ದಾರೆ
ಎಂದು ಅರೋಪಿಸಿ ಮುಖ್ಯಾಧಿಕಾರಿ ಪಟ್ಟಣದ ಪೊಲೀಸರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಂಜುಂಡಸ್ವಾಮಿಯನ್ನು ಬಂಧಿಸಲಾಗಿದೆ.
ಪ್ರಕರಣದ ವಿಚಾರಣೆ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.




