Mysore
21
broken clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಓದುಗರ ಪತ್ರ: ಯುವಜನರ ದಾರಿತಪ್ಪಿಸುವ ಸರ್ಕಾರದ ಕುಟಿಲ ನೀತಿ

ಹೊಸ ವರ್ಷದಂದು ಹಲವರು ಬಂಧು,ಬಳಗ, ಸ್ನೇಹಿತರ ಜತೆ ಸೇರಿ ಸಂಭ್ರಮಿಸಿದರು. ಆದರೆ ಸಾಂಸ್ಕ ತಿಕ ನಗರ ಮೈಸೂರಿನಲ್ಲಿ ದಾಖಲೆ ಮದ್ಯ ಮಾರಾಟವಾಗಿದೆ ಎಂದರೆ ಸುಖವೋ ಅಥವಾ ಸಂಕಟವೋ ತಿಳಿಯದಾಗಿದೆ. ಒಂದೆಡೆ ಕುಡಿತದ ಚಟ, ಡ್ರಗ್ಸ್, ತಂಬಾಕು ಸೇವನೆ, ಸಿಗರೇಟು ಹೀಗೆ ಹಲವಾರು ದುಶ್ಚಟಗಳನ್ನು ದೂರ ಮಾಡಲು ನಿರಂತರವಾಗಿ ಅರಿವು ಕಾರ್ಯಕ್ರಮಗಳು ನಡೆಯುತ್ತಿರುವಾಗ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾಗಿದೆ

ಎಂದರೆ ಜನರ ಮನಸ್ಥಿತಿ ಎತ್ತ ಸಾಗಿದೆ? ಈ ಸಂಗತಿ ಪ್ರಜ್ಞಾವಂತರೆಲ್ಲರೂ ತಲೆತಗ್ಗಿಸುವಂತಿದೆ. ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಯಾರ ಮನೆ ಹಾಳಾದರೂ ಪರವಾಗಿಲ್ಲ. ಹೆಂಡತಿ, ಮಕ್ಕಳು ಉಪಾಸವಿದ್ದರೂ ಚಿಂತೆ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಸರ್ಕಾರ ಬೊಕ್ಕಸ ತುಂಬಿದರೆ ಸಾಕು ಎಂದು ತೀರ್ಮಾನಿಸಿದಂತಿದೆ. ಏಕೆ ಈ ದ್ವಂದ್ವ? ಯುವಜನತೆ ಆಳುವವರ ಇಂತಹ ಕುಟಿಲಗಳ ಬಗ್ಗೆ ಎಚ್ಚೆತ್ತುಕೊಳ್ಳ ಬೇಕಾಗಿದೆ. ಸಾಂಸ್ಕ ತಿಕ ನಗರ ಎಂದು ಹೆಸರಾಗಿರುವ ಮೈಸೂರಿನಲ್ಲಿ ನಿಮ್ಮ ಕೌಶಲಗಳನ್ನು ತೋರಿಸಿ ದಾಖಲೆ ಮಾಡಿ. ಇದರಿಂದ ಎಲ್ಲರಿಗೂ ಹೆಮ್ಮೆ ಅನಿಸುತ್ತದೆ. ಗುಂಡಿನ ಗಮ್ಮತ್ತಿನಿಂದ ತೂರಾಡಿ ದಾಖಲೆ ಮಾಡುವುದು ಬೇಡ. ರಾಜ್ಯ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಮದ್ಯ ಮಾರಾಟಕ್ಕೆ ಮನಸ್ಸಿಗೆ ಬಂದಂತೆ ಪರವಾನಗಿ ನೀಡಬಾರದು. ಹೀಗೆ ಗಲ್ಲಿ ಗಲ್ಲಿಗೆ ಒಂದು ಮದ್ಯ ಮಾರಾಟ ಅಂಗಡಿಗೆ ಪರವಾನಗಿ ಕೊಟ್ಟರೆ ಕರ್ನಾಟಕ ಕುಡುಕರ ಸಾಮ್ರಾಜ್ಯವಾಗುತ್ತದೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಪಣತೊಡಬೇಕು. ಎಲ್ಲರೂ ಮೆಚ್ಚುವ ಹಾಗೆ ಸರಿದಾರಿಯತ್ತ ಸಾಗಬೇಕು.

– ಎಂ. ಎಸ್. ಉಷಾ ಪ್ರಕಾಶ್, ಮೈಸೂರು

Tags:
error: Content is protected !!