Mysore
28
overcast clouds

Social Media

ಸೋಮವಾರ, 03 ಆಗಸ್ಟ್ 2026
Light
Dark

ಪ್ರವಾಸಿಗರಿಗೆ ಉತ್ತಮ ಸೇವೆ ನೀಡಿ : ಎ.ಡಿ.ಸಿ ಶಿವರಾಜು

Provide better service to tourists ADC Shivaraju

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಅತಿಥಿಗಳ ಹಾಗೂ ಗಣ್ಯರ ಉತ್ತಮ ವಾಸ್ತವ್ಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೈಸೂರಿನ ಎಲ್ಲಾ ಪ್ರಮುಖ ಹೋಟೆಲ್ ಮಾಲೀಕರ, ವ್ಯವಸ್ಥಾಪಕರ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ ಹಾಗೂ ದಸರಾ ಸ್ಥಳಾವಕಾಶ ಉಪಸಮಿತಿಯ ಉಪವಿಶೇಷಾಧಿಕಾರಿಯೂ ಆದ ಡಾ.ಪಿ.ಶಿವರಾಜು ಅವರು, ಈ ಬಾರಿ ದಸರಾದಲ್ಲಿ ಕಳೆದ ಬಾರಿಗಿಂತ ಉತ್ತಮ ಸೇವೆ ನೀಡಿ ಪ್ರವಾಸಿಗರನ್ನು ನಮ್ಮ ಅತಿಥಿಗಳೆಂದು ತಿಳಿದು ಗೌರವಿಸಿ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಬೇಕೆಂದರು.

ಈ ಬಾರಿ ದಸರಾದಲ್ಲಿ ಕಳೆದ ಬಾರಿಗಿಂತ ಉತ್ತಮ ಸೇವೆ ನೀಡಿ ಪ್ರವಾಸಿಗರನ್ನು ನಮ್ಮ ಅತಿಥಿಗಳೆಂದು ತಿಳಿದು ಗೌರವಿಸಿ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಬೇಕೆಂದು ಹೋಟೆಲ್ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಹಾಜರಿದ್ದ ಸಂಬಂಧಿಸಿದ ಎಲ್ಲರೂ ಮೈಸೂರಿನ ಪರಂಪರೆಯನ್ನು ಹೆಚ್ಚಿಸುವ ರೀತಿಯಲ್ಲಿ ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.

ಉಪವಿಭಾಗಾಧಿಕಾರಿ ಆಶಪ್ಪ, ತಹಸಿಲ್ದಾರ್ ಮಹೇಶ್‌ಕುಮಾರ್ ಹಾಗೂ ಮೈಸೂರಿನ ಪ್ರಮುಖ ಹೋಟೆಲ್‌ಗಳ ಮಾಲೀಕರು, ವ್ಯವಸ್ಥಾಪಕರು ಹಾಜರಿದ್ದರು.

Tags:
error: Content is protected !!