ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆ ಬಳಿ ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ, ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮುಂದಾಗಿರುವುದನ್ನು ರೈತ ಸಂಘ ತೀವ್ರವಾಗಿ ವಿರೋಧಿಸುತ್ತಿದೆ. ಅಲ್ಲದೆ, ಹಲವು ಪರಿಸರ ತಜ್ಞರು ಕೂಡ ಪಾರ್ಕ್ ಮತ್ತು ಕಾವೇರಿ ಆರತಿ ಬೇಡ ಎನ್ನುತ್ತಿದ್ದಾರೆ.
ಆದರೂ ಸರ್ಕಾರ ಪಟ್ಟು ಸಡಿಲಿಸುತ್ತಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಪಾರ್ಕ್ ಪೂರಕವಾಗಿದೆ ಎಂಬುದು ಸರ್ಕಾರದ ವಾದ. ಇದರಿಂದ ನಿಜವಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಪಾರ್ಕ್ ಹಾಗೂ ಕಾವೇರಿ ಆರತಿ ಕಾರ್ಯಕ್ರಮದಿಂದ ಎಂತಹ ಅಪಾಯ ಎದುರಾಗಬಹುದು ಎಂಬುದು ಜನರಿಗೆ ಅರ್ಥವಾಗಬೇಕಿದೆ. ಆದರೆ, ಹೋರಾಟಗಾರರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: https://andolana.in/districts/mysore/yaduveer-wodeyar-meets-amit-shah/
ಜನರ ಬಳಿಗೆ ಹೋಗುತ್ತಿಲ್ಲ. ಸರ್ಕಾರ ಕೂಡ ತನ್ನ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಥವಾ ಜನಾಭಿಪ್ರಾಯ ಸಂಗ್ರಹಿಸುವ ಆಸ್ಥೆ ತೋರಿಸುತ್ತಿಲ್ಲ. ಜನರು ನಿರ್ಧಾರ ಕೈಗೊಳ್ಳುವುದರಿಂದ ಮಾತ್ರ ಈ ವಿವಾದ ಬಗೆಹರಿಯಬಹುದು ಅನಿಸುತ್ತಿದೆ. ಈ ಬಗ್ಗೆ ಹೋರಾಟಗಾರರು ಹಾಗೂ ಸರ್ಕಾರ ಚಿಂತಿಸಬೇಕು.
-ಜಿ.ವಿಶ್ವನಾಥ್, ಶ್ರೀರಂಗಪಟ್ಟಣ





