Mysore
20
mist

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಭಾರಿ ಗಾತ್ರದ ಹೆಬ್ಬಾವು ರಕ್ಷಣೆ

Large Python Rescued

ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ದಳವಾಯಿಕೋಡಿಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಜೆ ರೈತ ಬೋರಯ್ಯ ಜಮೀನಿನಲ್ಲಿ ಭಾರಿ ಗಾತ್ರದ 9 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತು. ಗ್ರಾಮದ ವೆಂಕಟೇಶ್ ಅವರು ಜಮೀನಿನಲ್ಲಿ ಹಸುಗಳಿಗೆ ಸೀಮೆ ಹುಲ್ಲು ಕುಯ್ಯಲು ಹೋಗಿದ್ದರು. ಸೀಮೆ ಹುಲ್ಲಿನ ನಡುವೆ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ಕಂಡು ತೀವ್ರ ಭಯಗೊಂಡಿದ್ದಾನೆ. ತಕ್ಷಣ ಹಲಗೂರಿನ ಸ್ನೇಕ್ ಜಗದೀಶ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಗದೀಶ್ ಮತ್ತು ಸಹಾಯಕ ಕೃಷ್ಣ ಹಾವನ್ನು ಸೆರೆ ಹಿಡಿದು ಬಸವನಬೆಟ್ಟ ಅರಣ್ಯ ಪ್ರದೇಶಕ್ಕೆ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾದರು. ಹಾವುಗಳು ಶೀತ ಪ್ರದೇಶವನ್ನು ಹುಡುಕಿಕೊಂಡು ಬರುತ್ತವೆ. ಆದ್ದರಿಂದ ಜನ ವಸತಿ ಪ್ರದೇಶ, ಜಮೀನು ಪ್ರದೇಶಗಳಲ್ಲಿ ಯಾವುದೇ ಬಗೆಯ ಹಾವುಗಳು ಕಂಡು ಬಂದರೇ ಮೊ.ನಂಬರ್ ಗೆ 8431500189 ಕರೆ ಮಾಡಿದರೆ, ಎಲ್ಲಾ ಬಗೆಯ ಹಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು ಎಂದು ಉರಗ ಪ್ರೇಮಿ ಜಗದೀಶ್ ಮನವಿ ಮಾಡಿದರು.

Tags:
error: Content is protected !!