Mysore
23
haze

Social Media

ಭಾನುವಾರ, 04 ಜನವರಿ 2026
Light
Dark

ಲಾಂಗ್‌ ಹಿಡಿದು ರೀಲ್ಸ್‌: ಆರೋಪಿ ಪೊಲೀಸರ ವಶಕ್ಕೆ

Long-handled reels Accused taken into police custody

ಮೈಸೂರು: ಲಾಂಗ್‌ ಹಿಡಿದು ರೀಲ್ಸ್ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಣಸೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಣಸೂರಿನ ಶಬ್ಬೀರ್‌ ನಗರದ ಕುರ್ಸಾನ್‌ ಎಂಬಾತನೇ ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ್ದ ಆಸಾಮಿಯಾಗಿದ್ದಾನೆ. ಈತ ಲಾಂಗ್‌ ಬೀಸುತ್ತಾ ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದ. ರೀಲ್ಸ್‌ ಮಾಡುವ ಜೊತೆಗೆ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ. ಲಾಂಗ್‌ ಹಿಡಿದು ಮಾಡಿದ್ದ ರೀಲ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿತ್ತು. ಕುರ್ಸಾನ್‌ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಹುಣಸೂರು ನಗರ ಠಾಣೆ ಪೊಲೀಸರು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕುರ್ಸಾನ್‌ನನ್ನು ಬಂಧಿಸಿದ್ದಾರೆ.

Tags:
error: Content is protected !!