Mysore
29
overcast clouds

Social Media

ಬುಧವಾರ, 17 ಜೂನ್ 2026
Light
Dark

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ

Illegally Transported Ration Rice Seized

ಕೊಳ್ಳೇಗಾಲ: ಅಕ್ರಮವಾಗಿ ಸಾಗಿಸುತ್ತಿದ್ದ ೭೮೫ ಕೆಜಿ ಪಡಿತರ ಅಕ್ಕಿಯನ್ನು ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪಟ್ಟಣದಿಂದ ಮಳವಳ್ಳಿ ಕಡೆಗೆ ಅಕ್ರಮವಾಗಿ ೭೮೫ ಕೆಜಿ ಪಡಿತರ ಅಕ್ಕಿಯನ್ನು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಎಸ್‌ಐ ವರ್ಷ ಹಾಗೂ ಫುಡ್ ಇನ್ಸ್‌ಪೆಕ್ಟರ್ ಪ್ರಸಾದ್ ಜಂಟಿ ದಾಳಿ ನಡೆಸಿ ನೂರ್ ಮೊಹಲ್ಲಾ ಬಡಾವಣೆಯ ಮುಕ್ತಾರ್ ಪಾಷ ಎಂಬಾತನನ್ನು ಬಂಧಿಸಿ ವಾಹನ ಹಾಗೂ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:
error: Content is protected !!