Mysore
23
clear sky

Social Media

ಭಾನುವಾರ, 19 ಏಪ್ರಿಲ 2026
Light
Dark

ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ

minister cheluvarayaswamy reaction on karnataka cm change discussion

ಹನೂರು: ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಹನೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಇಳಿಸುತ್ತೇವೆ ಎಂದು ಯಾರು ಹೇಳಿದ್ದಾರೆ? ಬಿಜೆಪಿ ಅವರು ಕಿತಾಪತಿ ಮಾಡುತ್ತಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ಇದೆ, ಎಲ್ಲವನ್ನೂ ಅದು ನೋಡಿಕೊಳ್ಳಲಿದೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ. 5 ವರ್ಷ ಸರ್ಕಾರ ಇರಲಿದೆ. ಕಾಂಗ್ರೆಸ್‌ನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಬಿಜೆಪಿಯವರಿಗೆ ಇದನ್ನು ತಡೆದುಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಡಿಕೆಶಿ ಶಸ್ತ್ರತ್ಯಾಗ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆಶಿ ಒಬ್ಬರು ಅಧ್ಯಕ್ಷರಿದ್ದಾರೆ, ಏನೇನೋ ಹೇಳೋಕೆ ಆಗಲ್ಲ. ಡಿಕೆಶಿ ಹಾಗೂ ಸಿಎಂ ಅನ್ಯೂನ್ಯವಾಗಿದ್ದಾರೆ ಎಂದರು.

Tags:
error: Content is protected !!