Mysore
19
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಸ್ಥಗಿತಗೊಂಡಿದ್ದ ಚಾರ್‌ ಧಾಮ್‌ ಯಾತ್ರೆ ಪುನರಾರಂಭ

suspended Char Dham Yatra resumes

ಡೆಹ್ರಾಡೂನ್:‌ ಉತ್ತರಾಖಂಡದಾದ್ಯಂತ ವರುಣಾರ್ಭಟ ಕೊಂಚ ಕಡಿಮೆಯಾಗಿದ್ದು, ಉತ್ತರ ಕಾಶಿಯಲ್ಲಿ ಗಂಗೋತ್ರಿ-ಯಮುನೋತ್ರಿ ದೇವಾಲಯಗಳು ತೆರೆದಿವೆ. ಈ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಾರ್‌ ಧಾಮ್‌ ಯಾತ್ರೆ ಪುನರಾರಂಭವಾಗಿದೆ.

ಭಾರೀ ಮಳೆ, ಮೇಘಸ್ಫೋಟದ ಹಿನ್ನೆಲೆಯಲ್ಲಿ ಚಾರ್‌ ಧಾಮ್‌ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಇಂದು ಮಳೆಯ ಅಬ್ಬರ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ಚಾರ್‌ ಧಾಮ್‌ ಯಾತ್ರೆ ಮತ್ತೆ ಆರಂಭವಾಗಿದೆ.

ಚಾರ್‌ ಧಾಮ್‌ ಯಾತ್ರೆಗೆ ಸಾಗುವ ಮಾರ್ಗಗಳಲ್ಲಿ ಅಲ್ಲಲ್ಲಿ ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ವಾಹನಗಳನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಹರಿದ್ವಾರ, ಖುಷಿಕೇಶ, ರುದ್ರಪ್ರಯಾಗ, ಶ್ರೀನಗರ, ಸೋನ್‌ ಪ್ರಯಾಗ್‌ ಹಾಗೂ ವಿಕಾಸನಗರದಲ್ಲಿ ಚಾರ್‌ ಧಾಮ್‌ ಯಾತ್ರಿಕರನ್ನು ತಡೆದು ಸುರಕ್ಷಿತ ಸ್ಥಳಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಮಳೆ ಕಡಿಮೆಯಾಗಿರುವುದರಿಂದ ಯಾತ್ರೆ ಮುಂದುವರಿದಿದೆ.

Tags:
error: Content is protected !!