Mysore
22
clear sky

Social Media

ಶುಕ್ರವಾರ, 23 ಜನವರಿ 2026
Light
Dark

30 ರಂದು ಕಾವೇರಿಗೆ ಮುಖ್ಯಮಂತ್ರಿ ಬಾಗಿನ

KRS Dam

ಮಂಡ್ಯ : ಜೂನ್ ತಿಂಗಳಲ್ಲೇ ರೈತರ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಜೂ.30ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

1960 ರಿಂದ ಈವರೆಗೆ ಕೃಷ್ಣರಾಜ ಸಾಗರ ಜಲಾಶಯ ಜೂನ್ ತಿಂಗಳಲ್ಲಿ ತುಂಬಿರುವ ನಿದರ್ಶನಗಳಿಲ್ಲ. ಆದರೆ, ಈ ಬಾರಿ ದೇವರು ಹಾಗೂ ವರುಣ ಕೃಪೆಯಿಂದ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಇದು ಇತಿಹಾಸದ ಪುಟ ಸೇರಲಿದೆ ಎಂದರು.

30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲೆಯ ಶಾಸಕರು ಮೈಸೂರು ಜನಪ್ರತಿನಿಧಿಗಳು ಬಾಗಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಬಹಳ ಜನಕ್ಕೆ ಪಾಪ ನೋವಾಗ್ತಿದೆ. ಇವರು ಬಂದಾಗೆಲ್ಲ ಮಳೆ ಬರೋದಿಲ್ಲ, ಬರಗಾಲ ಬರುತ್ತೆ ಅಂತಿದ್ದವರಿಗೆ ಇವಾಗ ಪಾಪ ನಿದ್ದೆ ಬರುತ್ತಿಲ್ಲ. ಕೆರೆಗಳು ತುಂಬಿ, ಬೆಳೆಗಳು ಚೆನ್ನಾಗಿ ಆಗುತ್ತಿರುವುದು ಕೆಲವರಿಗೆ ಸಂಕಟವಾಗುತ್ತಿದೆ. ನಮಗೆ ಬಹಳ ಖುಷಿ ಆಗ್ತಿದೆ, ಜನರು ಖುಷಿಯಾಗಿದ್ದಾರೆ ಎಂದರು.

Tags:
error: Content is protected !!