ಮೈಸೂರು : ಅಸಹಜ ಲೈಂಗಿಕ ಕ್ರಿಯೆ ಆರೋಪ ಪ್ರಕರಣದ ಪೊಲೀಸರ ” ಬಿ- ರಿಪೋರ್ಟ್” ಬೆನ್ನಲ್ಲೇ ಮೈಸೂರಿನ ಚಾಮುಂಡಿ ದರ್ಶನಕ್ಕೆ ಧಾವಿಸಿದ ಎಂಎಲ್ಸಿ ಡಾ. ಸೂರಜ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಚಾಮುಂಡಿ ಬೆಟ್ಟದ ಶುಕ್ರವಾರದ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ರೇವಣ್ಣ, ನಾಡಿನ ಜನರಿಗೆ ಒಳಿತಾಗಲಿ. ಉತ್ತಮ ಮಳೆಯಾಗಿ ರೈತರಿಗೆ ಉತ್ತಮ ಬೆಳೆಯಾಗಲಿ ಎಂದು ಬೇಡಿಕೊಂಡಿದ್ದೇನೆ. ಎಲ್ಲರಿಗೂ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದರು.
ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿಟಿ ದೇವೇಗೌಡ ತಟಸ್ಥ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೇನು ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ ಪವರ್ ಸೆಂಟರ್ ಜಾಸ್ತಿಯಾಗಿವೆ ಎಂಬ ರಾಜಣ್ಣ ಹೇಳಿಕೆಗೆ ಆ ಬಗ್ಗೆ ಸಮಯ ಬಂದಾಗ ಮಾತಾಡ್ತೀನಿ ಎಂದರು. ಜೆಡಿಎಸ್ ಬಿಜೆಪಿ ಸಮನ್ವಯ ಕೊರತೆ ಇದಿಯಾ ಎಂಬ ಪತ್ರಕರ್ತರ ಪ್ರಶ್ನೆಗೆ ರೇವಣ್ಣ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.





